ಹಾಲು ಖರೀದಿ ದರ ಇಳಿಕೆ ಆದೇಶ ವಾಪಸ್ ಪಡೆಯುವಂತೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಕೋಚಿಮುಲ್ ಮುತ್ತಿಗೆ

ಕೋಲಾರ: ಹಾಲು ಉತ್ಪಾದಕರ ಖರೀದಿ ದರ 2 ರೂಪಾಯಿ ಇಳಿಕೆ ಮಾಡಿರುವ ಕೋಚಿಮುಲ್ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಹಾಗೂ ಹಾಲು ಉತ್ಪಾದಕರ ಹಿತ ರಕ್ಷಣೆಗೆ ಒಕ್ಕೂಟವು ನಿಲ್ಲುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಬುಧವಾರ ಕೋಚಿಮುಲ್ ಒಕ್ಕೂಟದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪಕ್ಷದ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ. ಎಲ್ಲಾ ಅಗತ್ಯ ವಸ್ತುಗಳ ದರಗಳನ್ನು ಏರಿಸುವ ಮೂಲಕ ಸಾಮಾನ್ಯ ಜನರ ಜೊತೆ ಚೆಲ್ಲಾಟವಾಡುತ್ತಿದೆ ಇತಂಹ ಸಂದರ್ಭದಲ್ಲಿ ಹಾಲು ಉತ್ಪಾದಕರ ಖರೀದಿ ದರ 2 ರೂಪಾಯಿ ಕಡಿಮೆ ಮಾಡಿ ಹಾಲು ಉತ್ಪಾದಕರನ್ನು ಹೈನುಗಾರಿಕೆಯಿಂದ ದೂರ ಉಳಿಯುವಂತೆ ಮಾಡಿದ್ದಾರೆ ಎಂದು ಒಕ್ಕೂಟ ವಿರುದ್ಧ ಆರೋಪಿಸಿದರು.

ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ ಇಲ್ಲಿನ ಜನ‌ ಬೇರೆಬೇರೆ ಜಿಲ್ಲೆಗಳಂತೆ ಗೂಳೆ ಹೋಗದಂತೆ ಹೈನುಗಾರಿಕೆಯು ಜೀವನ ಕೊಟ್ಟಿದೆ ಕೋಚಿಮುಲ್ ಒಕ್ಕೂಟದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ನಿರ್ದೇಶಕರು ಐಶಾರಾಮಿ ಜೀವನ ನಡೆಸಲು ಕೂಡ ಹೈನುಗಾರಿಕೆ ಮತ್ತು ಜಿಲ್ಲೆಯ ಜನ ಎಂಬುದನ್ನು ಮರೆಯಬಾರದು ಕೂಡಲೇ ಹಾಲು ಖರೀದಿ ಧರ ಇಳಿಕೆ ಆದೇಶವನ್ನು ವಾಪಸ್ ಪಡೆದು ಕೋಚಿಮುಲ್ ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಬೇಕು ಇಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರದ ಬಗ್ಗೆ ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೊಮ್ಮನಹಳ್ಳಿ ಆರ್.ಆನಂದ್ ಮಾತನಾಡಿ, ಹಾಲು ಉತ್ಪಾದಕರ ಬಗ್ಗೆ ಗೌರವ ಮತ್ತು ಕಾಳಜಿ ಇದ್ದೀದ್ದರೆ ಆಡಳಿತ‌ ಮಂಡಳಿ ಹಾಲು ಉತ್ಪಾದಕರ ಖರೀದಿ ಧರ ಇಳಿಕೆ ಮಾಡುತ್ತಿರಲಿಲ್ಲ ಹಾಲು ಉತ್ಪಾದನೆ ಮಾಡಲು ಪಶು ಆಹಾರ ಬೆಲೆ ಏಳಿಕೆ ಗಗನಕ್ಕೇರಿದೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 40 ವೆಚ್ಚವಾಗುತ್ತದೆ ಅದರ ಮಧ್ಯೆಯೂ ರೈತರು ಕಷ್ಟದಲ್ಲಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಬರಗಾಲದ ಸಮಯದಲ್ಲಿ ಹಾಲು ಉತ್ಪಾದಕರ ಖರೀದಿ ದರ ಕಡಿಮೆ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೋಚಿಮುಲ್ ಆಡಳಿತ ಮಂಡಳಿ ಕೂಡಲೇ ಈ ಆದೇಶವನ್ನುಇದ್ದರು. ಪಡೆದು ಹಾಲು ಉತ್ಪಾದಕರ ರಕ್ಷಣೆಗೆ ನಿಲ್ಲಬೇಕು ಕಳೆದ ಎಂಟು ತಿಂಗಳಿಂದ ಸರಕಾರದಿಂದ ಪೋತ್ಸಾಹ ಧನ ಬಿಡುಗಡೆಯಾಗಿಲ್ಲ ಕೂಡಲೇ ಇದರ ಬಗ್ಗೆ ಆಡಳಿತ ಮಂಡಳಿ ಕ್ರಮ ವಹಿಸಬೇಕು ಕೋಚಿಮುಲ್ ಒಕ್ಕೂಟದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕೂಡಲೇ ತನಿಖೆ ಮಾಡಿ ಭ್ರಷ್ಟಾಚಾರ ನಡೆಸಿರುವ ವಿರುದ್ದ ಕಾನೂನು ಕ್ರಮ ವಹಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಕೋಚಿಮುಲ್ ಅಧಿಕಾರಿ ಗುರುಪ್ರಸಾದ್ ಮಾತನಾಡಿ, ಹಾಲು ಉತ್ಪಾದನೆ ಹೆಚ್ಚಳದ ಅನಿವಾರ್ಯವಾಗಿ ಖರೀದಿ ದರ ಕಡಿಮೆ ಮಾಡಲಾಗಿದೆ ಇದು ಕೇವಲ ತಾತ್ಕಾಲಿಕ ಪ್ರಕ್ರಿಯೆ ಅಷ್ಟೇ ನಿಮ್ಮ ಮನವಿ ಪತ್ರವನ್ನು ಆಡಳಿತ ಮಂಡಳಿ ಮತ್ತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದ ನಂತರ ಪ್ರತಿಭಟನೆ ಮುಕ್ತಾಯವಾಯಿತು.

ಈ ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ರಾಜು ಅಪ್ಪಿ, ಯುವ ಮೋರ್ಚಾ ಅಧ್ಯಕ್ಷ ತೇಜಸ್, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಿವಣ್ಣ, ಮಂಡಲ ಅಧ್ಯಕ್ಷರಾದ ನಾಗರಾಜರೆಡ್ಡಿ, ಅಶ್ವಥ್ ಗೌಡ, ಪಾರ್ಥಸಾರಥಿ, ಆರ್ ಲಕ್ಷ್ಮೀನಾರಾಯಣ ಶೆಟ್ಟಿ, ಕೃಷ್ಣಮೂರ್ತಿ, ಮುಖಂಡರಾದ ಬೆಳ್ಳಾವಿ ಸೋಮಣ್ಣ, ಅಗ್ರಹಾರ ರಂಗೇಶ್, ಓಹಿಲೇಶ್, ನಾಗರಾಜ್, ನಾರಾಯಣ ಶೆಟ್ಟಿ, ನಟರಾಜ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *