ಹಾಲು ಉತ್ಪಾದಕರ ಹಿತದೃಷ್ಟಿಯಿಂದ ನಂದಿನಿ ಉತ್ಪನ್ನಗಳನ್ನೇ ಬಳಸಿ- ಡಿ.ವಿ ಹರೀಶ್

ಕೋಲಾರ: ಜಿಲ್ಲೆಯಲ್ಲಿನ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಕೋಮುಲ್ ಮತ್ತು ಕೆಎಂಎಫ್ ವತಿಯಿಂದ ಉತ್ಪಾದಿಸುವ ನಂದಿನಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಉತ್ತಮ ಅರೋಗ್ಯ ಕಾಪಾಡುವ ಜೊತೆಗೆ ಹಾಲು ಉತ್ಪಾದಕರ ಹಿತ ಕಾಪಾಡಬಹುದಾಗಿದೆ ಎಂದು ಕೋಮಲ್‌ ನಿರ್ದೇಶಕ ವಡಗೂರು ಡಿ.ವಿ ಹರೀಶ್ ತಿಳಿಸಿದರು.

ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಶುಕ್ರವಾರ ಕೋಮುಲ್ ವತಿಯಿಂದ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರನ್ನು ಹೈನುಗಾರಿಕೆಯ ಉದ್ಯಮ ಕೈಹಿಡಿದಿದೆ ಹಾಲು ಉತ್ಪಾದನೆಯ ಜೊತೆಗೆ ಗುಣಮಟ್ಟದಲ್ಲಿ ಕೂಡ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದ್ದು ನಂದಿನಿ ಉತ್ಪನ್ನಗಳ ಬಳಕೆ ಇದಕ್ಕೆ ಉತ್ತರ ಆಯ್ಕೆಯಾಗಿದೆ ಜಿಲ್ಲೆಯ ರೈತರು ಮಳೆ ಬೆಳೆ ಇಲ್ಲದೆ ಪರಿತಪಿಸುತ್ತಾ ಬರದ ಛಾಯೇಯಲ್ಲಿ ಇರುವುದನ್ನು ಗಮನಿಸಿ ಎಂ.ವಿ ಕೃಷ್ಣಪ್ಪ ನವರು ದೂರದೃಷ್ಟಿಯಿಂದ ವಿದೇಶಿ ಹಾಲು ಉತ್ಪಾದನಾ ತಳಿಗಳನ್ನು ಪರಿಚಯಿಸಿದ ಕಾರಣ ಕೋಲಾರ ಜಿಲ್ಲೆಯ ರೈತರು ಇಂದು ತಮ್ಮ ಜೀವಾಳವನ್ನಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ ಎಂದರು.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಲಬೆರಕೆಯ ಹಾಲಿನ ಉತ್ಪನ್ನಗಳ ಬಗ್ಗೆ ಗ್ರಾಹಕರು ಜಾಗೃತಿ ವಹಿಸಬೇಕು ಪರಿಶುದ್ಧವಾಗಿ ಹಾಲು ಉತ್ಪಾದಕರಿಂದ ನೇರವಾಗಿ ಖರೀದಿಸಿದ ಹಾಲಿನಿಂದ ತಯಾರಿಸಲಾಗುವ ನಂದಿನಿ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು ಕೋಮಲ್ ಮತ್ತು ಹಾಲು ಮಹಾ ಮಂಡಳಿಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್, ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ಮಾರುಕಟ್ಟೆ ವ್ಯವಸ್ಥಾಪಕ ಲಕ್ಷ್ಮೀನಾರಾಯಣ, ಉಪ ವ್ಯವಸ್ಥಾಪಕ ನಂಜುಂಡಗೌಡ, ಸಹಾಯಕ ವ್ಯವಸ್ಥಾಪಕ ಲೋಕೇಶ್, ಮುದುವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್ ಬಾಬು, ಮುಖಂಡರಾದ ಜನಪನಹಳ್ಳಿ ಆನಂದ್, ಗದ್ದೆಕಣ್ಣೂರು ಚೌಡರೆಡ್ಡಿ, ಯಾನಾದನಹಳ್ಳಿ ಗೋಪಾಲ್, ಹೊಲ್ಲಂಬಳ್ಳಿ ಚಂದ್ರಶೇಖರ್, ರೆಡ್ಡಿಬಾಬು, ಮಳಿಗೆ ಮಾಲೀಕ ರಾಜಶೇಖರ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!