ತಾಲೂಕಿನ ಹಾಡೋನಹಳ್ಳಿ ಗ್ರಾಮದ ಹಾಡೋನಹಳ್ಳಿ ಸರ್ಕಲ್‌ನಲ್ಲಿ CL7 ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಿರುವುದನ್ನು ರದ್ದು ಮಾಡಬೇಕೆಂದು ತಹಶೀಲ್ದಾರ್, ದೊಡ್ಡಬಳ್ಳಾಪುರ ಅಬಕಾರಿ ನಿರೀಕ್ಷಕ, ಜಿಲ್ಲಾ ಅಬಕಾರಿ ಆಯುಕ್ತರಿಗೆ ಹಾಡೋನಹಳ್ಳಿ ಗ್ರಾಮಸ್ಥರೊಬ್ಬರು ಲಿಖತ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ತೂಬಗೆರೆ ಹೋಬಳಿ, ಹಾಡೋನಹಳ್ಳಿ ಗ್ರಾಮದ ಹಾಡೋನಹಳ್ಳಿ ಸರ್ಕಲ್‌ನಲ್ಲಿ CL7 ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಿದ್ದು, ಈ ವಿಚಾರ ಗ್ರಾಮಸ್ಥರ ಪರಿಗಣನೆಗೆ ಬಂದಿರುವುದಿಲ್ಲ. ಲೈಸನ್ಸ್ ಅನುಮತಿ ಅಬಕಾರಿ ಕಾನೂನು ವಿರುದ್ಧವಾಗಿರುತ್ತದೆ ಹಾಗೂ ಹಾಡೋನಹಳ್ಳಿ ಪ್ರಮುಖ ರಸ್ತೆಗೆ ಹೊಂದಿಕೊಂಡಿರುತ್ತದೆ. ಹಾಡೋನಹಳ್ಳಿ ಸರ್ಕಲ್ ಘಾಟಿ ಸುಬ್ರಮಣ್ಯ ಹಾಗೂ ತೂಬಗೆರೆಗೆ ಹೋಗುವಂತ ಪ್ರಮುಖ ರಸ್ತೆ. ಇಲ್ಲಿಗೆ ದಿನವೂ ನೂರಾರು ಹೆಣ್ಣು ಮಕ್ಕಳು ಪ್ರೌಢ ಶಾಲೆಗೆ ಹಾಗೂ ಕಾಲೇಜಿಗೆ ಹೋಗಲು ಬಸ್ಸು ಹತ್ತುವ ಸ್ಥಳವಾಗಿದೆ.
ಇದು ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ರಸ್ತೆಯಾಗಿದೆ. ಸರ್ಕಾರಿ ಕಟ್ಟಡ ಹಾಡೋನಹಳ್ಳಿ ಪಂಚಾಯಿತಿ ಸರಿ ಸುಮಾರು 70 ಮೀಟರ್ ಒಳಗೊಂಡಿದೆ. ಹಾಗೆ ದೇವಸ್ಥಾನಗಳಿದ್ದು, 100 ಮೀಟರ್ ದೂರದಲ್ಲಿ ದಲಿತರ ಕಾಲೋನಿಗಳಿವೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು CL7 ಬಾರ್ ಅಂಡ್ ರೆಸ್ಟೋರೆಂಟ್ ನಿಲ್ಲಿಸಬೇಕಾಗಿ ವಿನಂತಿ ಮಾಡುತ್ತೆನೆಂದು ತಿಳಿಸಿದ್ದಾರೆ.
ಒಂದು ಅನುಮತಿ ರದ್ದು ಮಾಡದೇ ಹೋದರೆ ಬಾರ್ ಓಪನಿಂಗ್ ದಿನವೇ ಊರಿನ ಸಮಸ್ತ ಜನರು ಯಾವುದೇ ಅನುಮತಿ ಪಡೆಯದೆ ಹೋರಾಟ ಮಾಡುತ್ತವೆಂದು ಎಚ್ಚರಿಕೆ ನೀಡಿದರು.