ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾಡೋನಹಳ್ಳಿ ಬಳಿ ಇಂದು ಸಂಜೆ ನಡೆದಿದೆ.
ತಾಲೂಕಿನ ಹಾಡೋನಹಳ್ಳಿ ನಿವಾಸಿ ದೇವರಾಜ್(44), ಮೃತ ದುರ್ದೈವಿ. ಬೈಕ್ ಗೆ ಡಿಕ್ಕಿ ಹೊಡೆದು ಸ್ಥಳದಿಂದ ಕಾರು ಸಮೇತ ಪರಾರಿಯಾಗಿರೋ ಕಾರು ಚಾಲಕ. ಕಾರಿನಲ್ಲಿ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದು ದೊಡ್ಡಬಳ್ಳಾಪುರ ಕಡೆ ಹೋಗುವ ವೇಳೆ ದೊಡ್ಡಬಳ್ಳಾಪುರದಿಂದ ಹಾಡೋನಹಳ್ಳಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿರುವ ಕಾರು. ಕೂಡಲೇ ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.