
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿಯಲ್ಲಿ ಕುರಿ-ಮೇಕೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸಾವಿರಾರು ರೂ. ಬೆಲೆ ಬಾಳುವ ಕುರಿ-ಮೇಕೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.

ಕಳೆದ ರಾತ್ರಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ಸಮೀಪದ ಮನೆಯೊಂದರ ಕೊಟ್ಟಿಗೆಯಲ್ಲಿ ಇರಿಸಿದ್ದ ಎರಡು ಮೇಕೆ ಹೋತಗಳು ಕಳ್ಳತನವಾಗಿದೆ..

ರೈತ ವೇಣುಗೋಪಾಲ್ ಎಂಬುವವರು ಕಳೆದ ಮೂರು ತಿಂಗಳಿಂದೆ ಸುಮಾರು 17.500 ರೂ. ಕೊಟ್ಟು ಎರಡು ಮೇಕೆ ಹೋತಗಳನ್ನು ತಂದಿದ್ದರು. ಅವುಗಳ ಈಗಿನ ಬೆಲೆ ಸುಮಾರು 40ಸಾವಿರ ರೂ. ಗೆ ಮಾರಾಟ ಆಗುತ್ತಿತ್ತು. ಇದೀಗ ಎರಡು ಮೇಕೆ ಹೋತಗಳು ಕಳ್ಳತನವಾಗಿವೆ. ಇದರಿಂದ ನಮಗೆ ತುಂಬಾ ನಷ್ಟ ಉಂಟಾಗಿದೆ. ಇತ್ತೀಚೆಗೆ ಹಾಡೋನಹಳ್ಳಿಯಲ್ಲಿ ಕುರಿ, ಮೇಕೆ ಕಳ್ಳತನ ಹೆಚ್ಚಾಗಿದೆ. ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿ ರೈತರ ನೆಮ್ಮದಿ ಬದುಕಿಗೆ ಅನುವು ಮಾಡಿಕೊಡಬೇಕು ಎಂದು ರೈತ ವೇಣುಗೋಪಾಲ್ ಹೇಳಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….