ಹಾಡಹಗಲೇ ಗ್ರಾಮಕ್ಕೆ ನುಗ್ಗಿದ ಚಿರತೆ: ಚಿರತೆ ಸೆರೆ ಹಿಡಿಯಲು ಹರಸಾಹಸ

ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಹಾಗೂ ಬೂಚನಹಳ್ಳಿ ಗ್ರಾಮಗಳಿಗೆ ಚಿರತೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಚಿರತೆ ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಚಿರತೆ ಸೆರೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿ ಶಾಮಕದಳ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಇತ್ತೀಚೆಗೆ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿ ಚಿರತೆಯ ಚಲನವಲ ಕಂಡುಬಂದಿತ್ತು. ಜಾನುವಾರುಗಳ ಮೇಲೆಯೂ ಆಗಾಗ ದಾಳಿ ನಡೆಸಿ ಬಲಿಪಡೆಯುತ್ತಿತ್ತು. ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು.

ಸದ್ಯ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ‌ ಮುಂದುವರಿದಿದ್ದು, ಚಿರತೆಯನ್ನು ಕಣ್ತುಂಬಿಕೊಳ್ಳಲು ಬೂಚನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಮೊಬೈಲ್ ನಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದಾರೆ..

Leave a Reply

Your email address will not be published. Required fields are marked *

error: Content is protected !!