ಹಾಜರಾತಿಗೆ ಮಾರ್ಕ್​ ಮಾಡಲು ಮುಖ್ಯೋಪಾಧ್ಯಯರ ಬಳಿ ಕೇಳಿದ ಶಿಕ್ಷಕಿ: ಈ ವೇಳೆ ಕೆನ್ನೆಯ ಮೇಲೆ ಬೆರಳಿಟ್ಟು ಮುತ್ತು ನೀಡುವಂತೆ ಸಂಜ್ಞೆ‌  ಮಾಡಿದ ಹೆಡ್ ಮಾಸ್ಟರ್ : ಶಿಕ್ಷಕಿ ಮುಂದೆ ಹೆಡ್ ಮಾಸ್ಟರ್ ಅಸಭ್ಯ ವರ್ತನೆ: ನೆಟ್ಟಿಗರ ಆಕ್ರೋಶ

ಶಿಕ್ಷಕಿಯೊಬ್ಬರು ತಮ್ಮ ಹಾಜರಾತಿಗೆ ಮಾರ್ಕ್​ ಮಾಡಲು ಶಾಲೆಯ ಮುಖ್ಯೋಪಾಧ್ಯಯರ ಬಳಿ ಕೇಳಿದಾಗ ಆಗ ಆತ ಕೆನ್ನೆಗೆ ಮುತ್ತು ಕೊಟ್ಟರೆ ನೀಡುತ್ತೇನೆ ಎಂದು ಹೇಳಿದ್ದಾನೆ.

ಈ ಘಟನೆ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಕೆನ್ನೆಗೆ ಮುತ್ತು ನೀಡುವಂತೆ ಕೇಳಿತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರಪ್ರದೇಶದಲ್ಲಿ ಸರ್ಕಾರಿ ಶಾಲೆಯ‌ ಶಿಕ್ಷಕರಿಗಾಗಿ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿತ್ತು. ಈ ವ್ಯವಸ್ಥೆ ಸಾಕಷ್ಟು ವಿರೋಧಗಳಿಗೆ ಕೂಡ ಎಡೆ ಮಾಡಿಕೊಟ್ಟಿತ್ತು. ಕೊನೆಗೆ ಯೋಗಿ ಅದಿತ್ಯನಾಥ್ ಸರ್ಕಾರ ಈ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಪ್ರಸ್ತುತ ತಡೆಹಿಡಿದಿದೆ. ಅದರ ಪರಿಣಾಮ ಶಿಕ್ಷಕಿಯರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.

ಮುಖ್ಯೋಪಾಧ್ಯಯರ ಬಳಿ ಬಂದ ಮಹಿಳಾ ಶಿಕ್ಷಕಿ ತನ್ನ ಹಾಜರಾತಿ ಮಾರ್ಕ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಈ ವೇಳೆ ಕೆನ್ನೆಯ ಮೇಲೆ ಬೆರಳಿಟ್ಟು ಸಂಜ್ಞೆ ಮಾಡಿದ ಹೆಡ್​ ಮಾಸ್ಟರ್​ ಒಂದು ಮುತ್ತು ಕೊಡು ಮಾರ್ಕ್​ ಮಾಡ್ತೀನಿ ಎಂದಿದ್ದಾನೆ. ಸರ್ಕಾರಿ ಶಾಲೆಯ ಹೆಡ್​ಮಾಸ್ಟರ್ ಮಾಡಿರುವ ಈ ಅಸಭ್ಯ ವರ್ತನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಘಟನೆಯನ್ನು ಮಹಿಳಾ ಶಿಕ್ಷಕಿ ವಿಡಿಯೋ ಮಾಡಿದ್ದಾಳೆ, ವಿಡಿಯೋದಲ್ಲಿ ಹೆಡ್​ ಮಾಸ್ಟರ್ ಮುತ್ತು ಕೇಳಿದಾಗ, ಇದಕ್ಕೆ ನನ್ನ ಒಪ್ಪಿಗೆಯಿಲ್ಲ, ಇದು ಅತ್ಯಂತ ಹೊಲಸು ಕೆಲಸ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!