ಪ್ರಿಯತಮೆಗೆ ಮತ್ತೋರ್ವನ ಜೊತೆ ಮದುವೆ ವಿಚಾರ ತಿಳಿದು ಬ್ಲೇಡ್ ನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ತಡರಾತ್ರಿ ತಾಲೂಕಿನ ಶ್ರೀ ಕ್ಷೇತ್ರ ಘಾಟಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ನಿತೀಶ್ ಆತ್ಮಹತ್ಯೆಗೆ ಯತ್ನ ಮಾಡಿರುವ ಪಾಗಲ್ ಪ್ರೇಮಿ. ಹಲವು ವರ್ಷಗಳಿಂದ ನಿತೀಶ್ ಬೆಂಗಳೂರು ಮೂಲದ ಯುವತಿಯ ಮೇಲೆ ಪ್ರೇಮಾಂಕುರವಾಗಿತ್ತು.
ಮಾ.15ರಂದು ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿರುವ ಕಲ್ಯಾಣ ಮಂಟಪದಲ್ಲಿ ತನ್ನ ಪ್ರೇಯಸಿಯ ಮದುವೆ ವಿಚಾರ ತಿಳಿದು ಪಾಗಲ್ ಪ್ರೇಮಿ ಕಂಡು ದಿಗ್ಭ್ರಮೆಗೊಂಡು,
ಮದುವೆ ಮನೆಯಲ್ಲೇ ಬ್ಲೇಡ್ ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.
ಕೂಡಲೇ ಸ್ಥಳಕ್ಕೆ 112 ವಾಹನದ ಪೊಲೀಸರು ದೌಡಾಯಿಸಿ ರಕ್ತದ ಮಡುವಿನಲ್ಲಿ ಇದ್ದ ವ್ಯಕ್ತಿಯನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ. ನಿತೀಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ, ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಈ ಘಟನೆಯಿಂದಾಗಿ ಮದುವೆ ಅರ್ಧಕ್ಕೆ ನಿಂತಿದ್ದು,
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮನನೊಂದ ಯುವಕ ಬ್ಲೇಡ್ ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಯುವತಿ ಕಡೆಯವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕೃತ್ಯದ ಸತ್ಯಾಂಶ ಪೊಲೀಸ್ ತನಿಖೆ ನಂತರ ಹೊರಬೀಳಲಿದೆ.