
ಲಾರಿಯೊಂದು ಹಸುಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ ನಡೆದಿದೆ…
ದಾಬಸ್ ಪೇಟೆ ಕಡೆಯಿಂದ ಹೊಸಕೋಟೆಗೆ ತೆರಳುತ್ತಿದ್ದ ಲಾರಿಯೊಂದು ರಸ್ತೆ ಬದಿಯಲ್ಲಿ ಇದ್ದ ಹಸುಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಹಸು ಸ್ಥಳದಲ್ಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದೆ. ಸ್ಥಳೀಯರು ಘಟನೆ ಗಮನಿಸಿ ಹಸುಗೆ ನೀರು ಕುಡಿಸಿಲು ಯತ್ನಿಸಿದ್ದಾರೆ…

ಹಸುಗೆ ಡಿಕ್ಕಿ ಹೊಡೆದ ಲಾರಿ ಸ್ಥಳದಿಂದ ಕಾಲ್ಕಿತ್ತಿದೆ. ಲಕ್ಷಾಂತರ ರೂ. ಮೌಲ್ಯದ ಹಸುವಿನ ಸ್ಥಿತಿ ಕಂಡು ರೈತ ಕಂಗಾಲಾಗಿದ್ದಾನೆ…
ಈ ಮಣಸಿ ಗೇಟ್ ಸಮೀಪ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ.. ಅಪಘಾತಗಳು ಆಗದಂತೆ ಸಂಬಂಧಪಟ್ಟವರು ಯಾವ ಕ್ರಮಗಳು ಕೈಗೊಳ್ಳದೇ ನಿದ್ರಾವಸ್ಥೆಯಲ್ಲಿ ಇದ್ದಾರೆ ಎಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದಾರೆ…