ಬೆಂಗಳೂರು : ಭರ್ಜರಿ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ 7 ರನ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಸಿರು ಪೋಷಾಕಿನಲ್ಲಿ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭ ಉತ್ತಮವಾಗಿರಲಿಲ್ಲ ಆರಂಭಿಕ ಹಾಗೂ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟ್ರಿಂಟ್ ಬೋಲ್ಟ್ ಅವರ ಎಲ್ ಬಿ ಬಲೆಗೆ ಬಿದ್ದು ಗೋಲ್ಡನ್ ಡಕ್ ಔಟ್(0) ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಆರಂಭಿಕ ಆಘಾತದ ನಡುವೆಯೂ ಫಾಪ್ ಡುಪ್ಲೆಸಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ (62) ರನ್ ಗಳಿಸಿದರೆ ಸ್ಪೋಟಕ ಬ್ಯಾಟಿಂಗ್ ಮಾಡಿದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸವೆಲ್ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ (77) ರನ್ ಗಳಿಸಿ ತಂಡವನ್ನು ಬೃಹತ್ ಮೊತ್ತ ಕಲೆ ಹಾಕಲು ಬುನಾದಿ ಹಾಕಿದರು.
ನಂತರ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (16) ರನ್ ಗಳಿಸಿ ತಂಡದ ಮೊತ್ತವನ್ನು 190 ರ ಗಡಿಗೆ ಕೊಂಡೊಯ್ದುರು, ರಾಜಸ್ತಾನ್ ರಾಯಲ್ಸ್ ಪರವಾಗಿ ಟ್ರಿಂಟ್ ಬೋಲ್ಟ್ ಹಾಗೂ ಸಂದೀಪ್ ಶರ್ಮ ತಲಾ ಎರಡು ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ನ ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (0) ಸೊನ್ನೆ ಸುತ್ತಿದರು, ಇಂತಹ ಸಂದರ್ಭದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ (57) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (47) ರನ್ ಗಳಿಸಿ ಎರಡನೇ ವಿಕೆಟ್ ಗೆ 98 ರನ್ ಗಳಿಸಿ ಭರವಸೆ ಮೂಡಿಸಿದರು.
ಸಂಜು ಸ್ಯಾಮ್‌ಸನ್ (22) ಹಾಗೂ ದ್ರುವ್ ಜುರೇಲ್ (34) ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ, ಆರ್ ಸಿಬಿ ಪರವಾಗಿ ಹಷ೯ಲ್ ಪಟೇಲ್ ಮೂರು ವಿಕೆಟ್ ಪಡೆದರು, ಸ್ಪೋಟಕ ಬ್ಯಾಟಿಂಗ್ ಮಾಡಿದ ಗ್ಲೇನ್ ಮ್ಯಾಕ್ಸವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.