ದೊಡ್ಡಬಳ್ಳಾಪುರ: ಆಧುನಿಕತೆಯ ಸೋಗಿನಲ್ಲಿ ಹಳ್ಳಿಯ ಸೊಗಡು ಮಾಯವಾಗುತ್ತಿದೆ. ಗ್ರಾಮೀಣರ ಬದುಕು, ಪ್ರಾಣಿ-ಪಕ್ಷಿಯೊಂದಿಗಿನ ಅನೋನ್ಯತೆ, ಜನರ ಸಂಸ್ಕೃತಿ- ಸಂಪ್ರದಾಯ, ಆಚಾರ-ವಿಚಾರಗಳು ಇಂದಿನ ನವಪೀಳಿಗೆಗೆ ಅಪಥ್ಯೆ ಎನಿಸಿವೆ. ಆದರೆ, ಹಳ್ಳಿಯ ಸೊಗಡನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮಕ್ಕೆ ನ್ಯಾಷನಲ್ ಪ್ರೈಡ್ ಶಾಲೆ ಸಾಕ್ಷಿಯಾಯಿತು.
ಶಾಲೆಯ ಒಳಾವರಣದಲ್ಲಿ ಮಕ್ಕಳು ಹಾಗೂ ಪೋಷಕರಿಗಾಗಿ ವಿವಿಧ ಆಟಗಳು, ಮ್ಯಾಜಿಕ್ ಶೋ, ಟ್ಯಾಟೂ, ಪುಟಾಣಿ ಮಕ್ಕಳ ರ‌್ಯಾಂಪ್‌ವಾಕ್ ಮುದ ನೀಡಿತು. ಮಕ್ಕಳ ಜೊತೆ ಪೋಷಕರೂ ಕೂಡ ಮಕ್ಕಳಾಗಿ ಮನರಂಜನೆ ಅನುಭವಿಸಿದರು.
ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ಹನುಮಾನ್ ಚಾಲಿಸಾ, ಭಗವದ್ಗೀತೆ, ಬೈಬಲ್ ಸ್ತೋತ್ರ ಹಾಗೂ ಧುವ ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಜೊತೆಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಪ್ರಪ್ರಥಮ ಬಾರಿಗೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ 3ಡಿ ಅನಿಮೇಶನ್ ಯಂತ್ರವನ್ನು ಕಲಿಕೆಗೆ ಅಳವಡಿಸಿ ಕಲಿಸಲಾಗುತ್ತಿದೆ ಎಂದು ವಿವರಿಸಿದರು.
ಶಾಲೆಯ ಪ್ರಾಂಶುಪಾಲರಾದ ರಶ್ಮಿ ಮಾತನಾಡಿ, ಶಾಲೆಯಲ್ಲಿ ಆಯೋಜಿಸಿರುವ ಫಾರ್ಮ್ ಪಾರ್ಟಿ ವಿನೂತನವಾಗಿದೆ. ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡು ಗ್ರಾಮೀಣ ಸೊಗಡಿನ ಜೊತೆಗೆ ಪ್ರಾಣಿ ಪಕ್ಷಿಗಳನ್ನು ನೇರವಾಗಿ ನೋಡಿ ಆನಂದಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ರಾಜು, ಶಾಲಾ ಸಿಬ್ಬಂದಿ, ಶಿಕ್ಷಕ ವೃಂದ ಪಾಲ್ಗೊಂಡಿತ್ತು.
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…
ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…
ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…