ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಕ್ರಮಕ್ಕೆ ಒತ್ತಾಯಿಸಿ ರೈತ ಸಂಘದಿಂದ ಅ.28 ಅಬಕಾರಿ ಕಚೇರಿಗೆ ಮುತ್ತಿಗೆ

ಕೋಲಾರ: ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆಯದೇ ಗ್ರಾಮೀಣ ಪ್ರದೇಶದ ಪೆಟ್ಟಿಗೆ ಅಂಗಡಿ, ಟಿ ಸ್ಟಾಲ್, ಚಿಲ್ಲರೆ ಅಂಗಡಿ ಮನೆಗಳಲ್ಲೂ ಹಾಗೂ ರಾಷ್ಟ್ರೀಯ ಹೆದ್ದಾರಿಯ ಡಾಬಾಗಳಲ್ಲಿ ರಾಜಾರೋಷವಾಗಿ ಮಧ್ಯೆ ಮಾರಾಟವನ್ನು ಯಾವ ಅಧಿಕಾರಿಗಳ ಭಯವಿಲ್ಲದೆ, ನಡೆಯುತ್ತಿದೆ ಇದನ್ನು ಹತೋಟಿಗೆ ತರಬೇಕಾದ ಅಬಕಾರಿ ಇಲಾಖೆ ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳ ಕ್ರಮ ಖಂಡಿಸಿ ರೈತ ಸಂಘದಿಂದ ಅ.28ರ ಸೋಮವಾರದಂದು ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಲು ರೋಜೋರಹಳ್ಳಿ ಗೇಟ್‌ನಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಿನ್ನುವ ಅನ್ನಕ್ಕೆ ಬರವಿದ್ದರೂ ಹಳ್ಳಿ ಹಳ್ಳಿಯ ಬೀದಿಗಳಲ್ಲಿ ಮಧ್ಯ ಮಾರಾಟವು ನಡೆಯುತ್ತಿದೆ ಗ್ರಾಮೀಣ ಪ್ರದೇಶದ ಜನ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ ಇದನ್ನು ತಡೆಯಬೇಕಾದ ಅಧಿಕಾರಿಗಳೇ ತಿಂಗಳ ಮಾಮೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಅಬಕಾರಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ನೀಡಿದರೆ ಇಲಾಖೆಯಿಂದ ಮದ್ಯ ಮಾರಾಟಗಾರರಿಗೆ ನಿಯತ್ತಾಗಿ ಮಾಹಿತಿ ಕೊಟ್ಟು ಅವರು ಕೊಡುವ ಕಾಸಿಗೆ ಬಡವರ ಬದುಕಿನ ಜೊತೆ ಚೆಲ್ಲಾಟವಾಡಿದ್ದಾರೆ ರಾಜಾರೋಷವಾಗಿ ಆ ಆದೇಶಕ್ಕೆ ಅಧಿಕಾರಿಗಳು ಕವಡೆ ಕಾಸಿನ ಬೆಲೆ ನೀಡದೆ ಲಂಚಕ್ಕೆ ಅಬಕಾರಿ ಇಲಾಖೆಯನ್ನು ಅಡ ಇಟ್ಟಿರುವುದು ಸತ್ಯಕ್ಕೆ ದೂರವಾದ ವಿಷಯವಲ್ಲ ಬರಗಾಲಕ್ಕೆ ತುತ್ತಾಗಿದ್ದರೂ ಕುಡಿಯುವ ನೀರಿಗೆ ಬರವಿದ್ದರೂ ಆದರೆ ಸಾರಾಯಿ ಮಾತ್ರ ಪ್ರತಿ ಹಳ್ಳಿಯ ಗಲ್ಲಿಗಲ್ಲಿಯಲ್ಲೂ ೩-೪ ಕಡೆ ದೊರೆಯುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಅಕ್ರಮ ಮಧ್ಯೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಹತೋಟಿಗೆ ತರಬೇಕಾದ ಅಧಿಕಾರಿ ವರ್ಗ ನಾಪತ್ತೆಯಾಗಿದ್ದಾರೆ ಎಂದರು.

ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ ನಗರಗಳಲ್ಲಿ ಬೆಳಿಗ್ಗೆ ೬ ಗಂಟೆಗೆ ಟೀ ಕಾಫಿ ಅಂಗಡಿಗಳು ತೆರದಂತೆ ಬಾರ್‌ಗಳನ್ನು ತೆಗೆದು ಕಾನೂನು ಎನ್ನುವುದನ್ನು ಬಾರ್ ಮಾಲೀಕರು ಕಾಲ ಕಸ ಮಾಡಿಕೊಂಡು ಮೆರೆಯುತ್ತಿದ್ದಾರೆ. ಈ ಅಕ್ರಮ ಮಧ್ಯೆದ ಅಂಗಡಿಗಳಿಂದ ಹಳ್ಳಿಗಳಲ್ಲಿ ಮತ್ತು ಡಾಬಾಗಳಲ್ಲಿ ಪ್ರತಿನಿತ್ಯ ಗಲಾಟಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗಿ ಸಾವುಗಳು ಸಂಭವಿಸುವುದು ಆಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನೆ ಇದ್ದಾರೆ ಕೂಡಲೇ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ಹಳ್ಳಿ ಜನರ ಹಿತಾಸಕ್ತಿ ಹಾಗೂ ಆರೋಗ್ಯ ಕಾಪಾಡಲು ಹಳ್ಳಿಗಳಲ್ಲಿ ಜನ ನೆಮ್ಮದಿಯಿಂದ ಇರಲು ಈ ದಿನಸಿ ಅಂಗಡಿಗಳ ಹಾಗೂ ಹೆದ್ದಾರಿ ಡಾಬಾಗಳ ಮಧ್ಯೆ ಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಈ ಸಭೆಯಲ್ಲಿ ರೈತ ಸಂಘದ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತೆರ‍್ನಹಳ್ಳಿ ಆಂಜಿನಪ್ಪ, ಬಂಗವಾದಿ ನಾಗರಾಜ್‌ಗೌಡ, ಅಲವಟಿ ಶಿವು, ರಾಜೇಂದ್ರ ರೆಡ್ಡಿ, ಶೈಲಜ, ರಾಧಮ್ಮ, ರೋಜ, ಶಾಂತಮ್ಮ, ರತ್ನಮ್ಮ, ಶೋಭ, ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!