ಹಳ್ಳಿಗರೇ ನಿಮ್ಮ ಮನೆಯಲ್ಲಿ ನಾಟಿ ಕೋಳಿ ಸಾಕಿದ್ದೀರಾ ಹಾಗಾದರೆ ..ಎಚ್ಚರ..! ರಾತ್ರೋರಾತ್ರಿ ನಿಮ್ಮ ನಾಟಿ ಕೋಳಿಗೆ ಮಸಾಲೆ ಹಾಕ್ತಾರೆ ಖದೀಮರು….. ಹಣ, ಚಿನ್ನ, ಬೆಳ್ಳಿ ಅಯ್ತು ಈಗ ನಾಟಿ ಕೋಳಿಗಳೇ ಕಳ್ಳರ ಟಾರ್ಗೆಟ್ ಆಗಿದೆ.
ನಾಟಿ ಕೋಳಿ ಕಳ್ಳರು ಚಿಕ್ಕಬಳ್ಳಾಪುರದಲ್ಲಿ ಬೀಡು ಬಿಟ್ಟಿದ್ದಾರೆ. ಸುಮಾರು ಮೂರು ತಿಂಗಳಿಂದ ಕೋಳಿ ಕಳ್ಳರ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ನಾಟಿ ಕೋಳಿ ಕಳ್ಳರ ಕಾಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.
ಕೋಳಿ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೋಳಿ ಕಳ್ಳರ ಕಾಟ ತಾಳಲಾರದೆ ಸಾರ್ವಜನಿಕರು ಪೊಲೀಸರ ಮೊರೆ ಹೋಗಿದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು ಹತ್ತು ಹಳ್ಳಿಗಳಲ್ಲಿ ಕೋಳಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನಾಟಿ ಕೋಳಿಗಳು ಮಂಗಮಾಯವಾಗುತ್ತಿವೆ. ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ರಾಸ್, ಮಸ್ತೇನಹಳ್ಳಿ , ಕೊಂಗನಳ್ಳಿ, ಉಲಪನಹಳ್ಳಿ ಕತ್ತರಿಗುಪ್ಪಿಯಲ್ಲಿ ಕೋಳಿ ಕಳ್ಳತನವಾಗುತ್ತಿವೆ.
ಶಿಡ್ಲಘಟ್ಟ ತಾಲ್ಲೂಕಿನ ಚಿಂತೊಡಪಿ, ಕುಂದ್ಲಗುರ್ಕಿ ಸೇರಿದಂತೆ ಹತ್ತು ಗ್ರಾಮಗಳಲ್ಲಿ ಕೋಳಿ ಕಳ್ಳತನ ಮಾಡಲಾಗಿದೆ.