ಉತ್ತರ ಪ್ರದೇಶದ ಮೋತಿಗಂಜ್ ಹಾಗೂ ಜಿಲ್ಹಾಹಿ ರೈಲು ನಿಲ್ದಾಣಗಳ ನಡುವಿನ ಗೊಂಡಾ ಬಳಿ 15904 ಸಂಖ್ಯೆಯ ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್ ಹೆಸರಿನ ಪ್ರಯಾಣಿಕ ರೈಲಿನ ಹಲವು ಬೋಗಿಗಳು ಗುರುವಾರ ಹಳಿತಪ್ಪಿದ್ದು, ಘಟನೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳಿ ತಪ್ಪಿದ ಹಿನ್ನೆಲೆ ರೈಲಿನ ಹಲವು ಬೋಗಿಗಗಳಿಗೆ ಹಾನಿಯಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಚರಣೆ ನಡೆಸಲಾಗುತ್ತಿದೆ.
ಪ್ರಯಾಣಿಕರು ತಮ್ಮ ಸರಂಜಾಮುಗಳನ್ನು ಹಿಡಿದುಕೊಂಡು ಹಳಿಯ ಬದಿಗಳಲ್ಲಿ ನಿಂತಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸಲು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.