ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರ ಕ್ರಾಸ್ ಬಳಿಯಲ್ಲಿದ್ದ ಹೊಂಗೆ ಮರದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷಗೊಂಡಿತ್ತು.
ಹಲವು ಗಂಟೆಗಳ ಕಾರ್ಯಾಚರಣೆ ನಂತರ ಚಿರತೆ ಮರಿಯನ್ನು ಸೆರೆಹಿಡಿಯಲಾಗಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ಮರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕಳೆದ ರಾತ್ರಿ ಸುಮಾರು 10:30ರಲ್ಲಿ ಬಲೆಗೆ ಚಿರತೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಿರತೆ ಪ್ರತ್ಯಕ್ಷಗೊಂಡಿರುವ ಪರಿಣಾಮ ಜನರಲ್ಲಿ ಆತಂಕ ಉಂಟು ಮಾಡಿತ್ತು. ಚಿರತೆ ಮರಿ ಭಯದಿಂದ ಮರದಿಂದ ಇಳಿಯದೇ ಅಲ್ಲೇ ಕುಳಿತಿತ್ತು.
ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಚಿರತೆ ಮರಿಯನ್ನು ಸೆರೆಹಿಡಿದಿದ್ದಾರೆ ಎನ್ನಲಾಗಿದೆ.