Categories: ತುಮಕೂರು

ಹಣದ ದುರಾಸೆ: ಚಿನ್ನ ದೋಚಲು ಹೋಗಿ, ವಯೋವೃದ್ದೆಯ ಜೀವ ತೆಗೆದ ಪಾಪಿ: ಆರೋಪಿ ಬಂಧನ

ಹಣದ ದುರಾಸೆಗಾಗಿ ಚಿನ್ನ ದೋಚಲು ಹೋಗಿ, ವಯೋವೃದ್ದೆಯನ್ನು ಕೊಲೆಮಾಡಿದ ಆರೋಪಿಯನ್ನು ಶಿರಾ ಗ್ರಾಮಾಂತರ ವೃತ್ತದ ಪೊಲೀಸರು ಬಂಧನ ಮಾಡಿದ್ದಾರೆ.

ಅ.31ರಂದು ಶಿರಾ ತಾಲ್ಲೂಕು, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದು ದೊಡ್ಡಬಾಣಗೆರೆ ಗ್ರಾಮದ ಮನೆಯಲ್ಲಿ ಒಂಟಿಯಾಗಿದ್ದ ಸುಮಾರು 86 ವರ್ಷದ ಪುಟೀರಮ್ಮ ಎನ್ನುವ ವಯೋವೃದ್ದೆಯನ್ನು ಬರ್ಬರವಾಗಿ ಕೊಲೆ ಮಾಡಿ ಆಕೆಯ ಕೊರಳಲ್ಲಿದ್ದ ಸುಮಾರು 53 ಗ್ರಾಂ ಚಿನ್ನದ ಸರವನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಮೃತೆಯ ಮಗ ವೀರಣ್ಣ ನೀಡಿದ ದೂರಿನ ಮೇರೆಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ಮೊ.ನಂ. 138/2025 ಕಲಂ 103, 309(6) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ದೊಡ್ಡಬಾಣಗೆರೆ ಗ್ರಾಮದ ಮೃತೆಯ ಸಂಬಂಧಿಕನಾದ ಆರೋಪಿ ಶ್ರೀಧರ ಕುಡಿತ, ಹೆಂಗಸರ ಸಹವಾಸ ಜೂಜಾಟದಂತಹ ದುಶ್ಚಟಗಳಿಗೆ ಒಳಗಾಗಿದ್ದು, ಹಣದ ದುರಾಸೆಗಾಗಿ ಅ.31ರಂದು ಒಂಟಿಯಾಗಿ ಅಡುಗೆ ಮನೆಯಲ್ಲಿದ್ದ ಪುಟೀರಮ್ಮರವರಿಗೆ ಹಿಂದಿನಿಂದ ಬಂದು ಬಟ್ಟೆಯ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೆಳಗೆ ಬೀಳಿಸಿ ಮುಖಕ್ಕೆ ಟವೆಲ್ ಒತ್ತಿಹಿಡಿದು ಕೊಲೆ ಮಾಡಿ ಆಕೆಯ ಕೊರಳಿನಲ್ಲಿದ್ದ 53 ಗ್ರಾಂ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದನು.

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್. ರವರ ನೇತೃತ್ವದಲ್ಲಿ, ಶಿರಾ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಿ.ಕೆ. ಶೇಖರ್ ರವರ ಮಾರ್ಗಸೂಚನೆ ಮೇರೆಗೆ, ಶಿರಾ ಗ್ರಾಮಾಂತರ ವೃತ್ತದ ಸಿಪಿಐ, ಡಿ.ಜಿ.ಶ್ರೀನಿವಾಸ, ಪಿಎಸ್‌ಐ ಸಂಜಯ್, ಎ.ಎಸ್.ಐ ನರಸಿಂಹಯ್ಯ ರವರುಗಳು ಮತ್ತು ಸಿಬ್ಬಂದಿ ಸಿ.ಪಿ.ಕಿರಣ್‌ ಕುಮಾರ್, ಪ್ರಸಾದ್‌ ಬಿ.ಕೆ, ರೇಣುಕ, ಹನುಮಂತಚಾರ್, ಷಫೀವುಲ್ಲಾ, ಕರಿಯಪ್ಪ, ಭೂತರಾಜು ಮತ್ತು ಚಾಲಕರುಗಳಾದ ಮಂಜುನಾಥ, ರಘುಕುಮಾ‌ರ್ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಮತ್ತು ದುಶ್ಯಂತ್ ರವರುಗಳ ಅಪರಾಧ ಪತ್ತೆ ತಂಡವನ್ನು ರಚಿಸಿದ್ದು, ಸದರಿ ತಂಡವು ಕಾರ್ಯಚರಣೆ ನಡೆಸಿ ಶೀಘ್ರವಾಗಿ ಶಿರಾ ನಗರದ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸುಲಿಗೆ ಮಾಡಿದ ಸರವನ್ನು ಬೆಂಗಳೂರು ನಗರದ ಬಾಗಲುಕುಂಟೆಯಲ್ಲಿರುವ ಖಾಸಗಿ ಬ್ಯಾಂಕಿನಲ್ಲಿ 2,01,000=00 ರೂ.ಗಳಿಗೆ ಗಿರವಿ ಇಟ್ಟಿದ್ದು, ಈ ಗಿರಿವಿಯಿಂದ ಬಂದ ಹಣದಲ್ಲಿ ಒಂದು ಮೊಬೈಲ್ ಫೋನ್, ಬಟ್ಟೆಗಳನ್ನು ಖರೀದಿಸಿ ಹಾಗೂ ಲೈಂಗಿಕ ಕಾರ್ಯಕರ್ತೆಯರ ಸಹವಾಸಕ್ಕೆ ದುಂದುವೆಚ್ಚ ಮಾಡಿರುತ್ತಾನೆಂದು ತಿಳಿದು ಬಂದಿರುತ್ತದೆ. ಈತನು ಬೆಂಗಳೂರು ನಗರದ ಮಡಿವಾಳ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಸುಲಿಗೆ ಹಾಗೂ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುತ್ತದೆ. ಪತ್ತೆ ತಂಡವು ಆರೋಪಿತನು ಖಾಸಗಿ ಬ್ಯಾಂಕಿನಲ್ಲಿ ಒತ್ತೆ ಇಟ್ಟಿದ್ದ 53 ಗ್ರಾಂ ಚಿನ್ನದ ಸರವನ್ನು ಯಥಾವತ್ತಾಗಿ ವಶಪಡಿಸಿಕೊಂಡಿದ್ದು ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಯ ಹೆಸರು ಮತ್ತು ವಿಳಾಸ.

ಶ್ರೀಧರ ಬಿನ್ ಲೇಟ್ ಈರಣ್ಣ 30 ವರ್ಷ ವ್ಯವಸಾಯ ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಕೆಲಸ. ದೊಡ್ಡಬಾಣಗೆರೆ ಗ್ರಾಮ ಶಿರಾ ತಾಲ್ಲೂಕ್ ತುಮಕೂರು ಜಿಲ್ಲೆ.

ಆರೋಪಿಯಿಂದ ವಶಪಡಿಸಿಕೊಂಡ ಮಾಲುಗಳ ವಿವರ

ಸುಮಾರು 6 ಲಕ್ಷ ರೂ ಬೆಲೆ ಬಾಳುವ 53 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು ಎರಡು ಮೊಬೈಲ್ ಫೋನ್‌ಗಳು.

ಆರೋಪಿಯನ್ನು ಪತ್ತೆಹಚ್ಚಿ ಚಿನ್ನದಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸದರಿ ಪತ್ತೆ ತಂಡವನ್ನು ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.

ಚಿನ್ನದ ಬೆಲೆ ಮಿತಿಮೀರಿ ಏರಿಕೆಯಾಗಿರುವುದರಿಂದ ಒಂಟಿಯಾಗಿ ವಾಸಿಸುವ ವಯೋವೃದ್ಧರು ಚಿನ್ನದ ಆಭರಣಗಳನ್ನು ಧರಿಸುವಾಗ ಎಚ್ಚರಿಕೆಯಿಂದ ಇರಬೇಕೆಂದು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಮನವಿ ಮಾಡಿದೆ.

Ramesh Babu

Journalist

Recent Posts

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

8 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

10 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

20 hours ago

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ- ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ- ಶಾಸಕ ಧೀರಜ್‌ ಮುನಿರಾಜ್

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್‌…

24 hours ago

ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…

1 day ago

ದೊಡ್ಡಬಳ್ಳಾಪುರ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕ: ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನೂತನ ತಹಶೀಲ್ದಾರ್ ಮಲ್ಲಪ್ಪ

ದೊಡ್ಡಬಳ್ಳಾಪುರದ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕಗೊಂಡಿದ್ದಾರೆ. ಈ ಹಿನ್ನೆಲೆ ಇಂದು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ…

1 day ago