ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ ಕಿಲಾಡಿ ಲೇಡಿ: ಅಧಿಕಾರಿ, ಉದ್ಯಮಿಗಳು ಸೇರಿದಂತೆ 50 ಜನರಿಗೆ ಮೋಸ: ಸದ್ಯ ಪೊಲೀಸರ ಅತಿಥಿ

ದುಡ್ಡೇ ದೊಡ್ಡಪ್ಪ…., ದುಡ್ಡು ಇದ್ರೆ ದುನಿಯಾ… ಹಣ ಕಂಡ್ರೆ ಹೆಣವೂ ಬಾಯಿ ಬಿಡುತ್ತೆ….! ಹೀಗೆ ನಾನಾ ರೀತಿಯಾಗಿ ಹಣದ ಬಗ್ಗೆ ಜನ ಮಾತಾಡುತ್ತಾರೆ. ಕಾಸಿಗಾಗಿ ಯಾರೂ ಏನು ಬೇಕಾದರೂ ಮಾಡೋದಕ್ಕೆ ತಯಾರಿಯಾಗಿರುತ್ತಾರೆ.

ಹಣಕ್ಕಾಗಿ ಮೋಸ, ವಂಚನೆ, ಕಳ್ಳತನ, ದರೋಡೆ, ಕೊಲೆ ಸೇರಿದಂತೆ ಇತರೆ ಅಪರಾಧ ಕೃತ್ಯಗಳಲ್ಲಿ ಜನ ತೊಡಗುತ್ತಾರೆ.

ಇದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಮಹಿಳೆಯೊಬ್ಬಳು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ.

ಮದುವೆ ಆಗೋದು ದುಡ್ಡು, ಚಿನ್ನ ದೋಚಿ ತಾಳಿ‌ ಕಟ್ಟಿದ ಗಂಡನನ್ನು ಬಿಟ್ಟು ಪರಾರಿ ಆಗೋದು, ಮತ್ತೆ ಕೆಲ ದಿನಗಳ ಬಳಿಕ ಮತ್ತೊಬ್ಬ ಯುವಕನ ಜೊತೆ ಮ್ಯಾರೇಜ್‌ ಆಗೋದು ಈಕೆಯ ಕೆಲಸ. ಹೀಗೆ ವಂಚಿಸಿ ದುಡ್ಡು, ಬಂಗಾರ ದೋಚಿ ಪರಾರಿಯಾಗುತ್ತಿದ್ದ ಈ ಕಿಲಾಡಿ ಲೇಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇಲ್ಲಿನ ತಿರುಪುರದಲ್ಲಿನ 35 ವರ್ಷದ ಅವಿವಾಹಿತ ಯುವಕನೊಬ್ಬ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ʼ‌ದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾ (30) ಎಂಬ ಮಹಿಳೆಯನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದನು. ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬಂದಿದ್ದು, ನಂತರ ಆತ ಸಂಧ್ಯಾಳ ಆಧಾರ್‌ ಕಾರ್ಡ್‌ ಪರಿಶೀಲಿಸಿದ್ದಾರೆ. ಆಧಾರ್‌ ಕಾರ್ಡ್‌ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯೇ ಇದೆ. ತನಗೆ ವಂಚನೆ ಮಾಡಿದ್ದಾಳೆ ಎಂದು ತಿಳಿದ ಈ ಯುವಕ ತಾರಾಪುರಂ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾನೆ. ಪೊಲೀಸರು ಸಂಧ್ಯಾಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಆಕೆಯ ವಂಚನೆಗಳು ಬಯಲಾಗಿವೆ.

10 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಈಕೆಗೆ ಒಂದು ಮಗು ಕೂಡಾ ಇದೆ. ನಂತರ ತನ್ನ ಮೊದಲ ಪತಿಯಿಂದ ಬೇರ್ಟಟ್ಟು ಹಣದಾಸೆಗೆ ಅವಿವಾಹಿತ ಪುರುಷೆನ್ನೇ ಟಾರ್ಗೆಟ್‌ ಮಾಡಿ ಮಾದುವೆಯಾಗಿ ಸ್ವಲ್ಪ ದಿನಕ್ಕೆಯೇ ದುಡ್ಡು ಬಂಗಾರವನ್ನು ಎತ್ತಿಕೊಂಡ ಎಸ್ಕೇಪ್‌ ಆಗುತ್ತಿದ್ದಳು. ಹೀಗೆ ಡಿವೈಎಸ್ಪಿ, ಎಸ್ಪಿ, ಉದ್ಯಮಿಗಳು ಸೇರಿದಂತೆ 50 ಜನರಿಗೆ ವಂಚಿಸಿದ್ದಾಳೆ. ಇದೀಗ ಆಕೆಯ ಮೋಸದಾಟ ಬಯಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ.

Leave a Reply

Your email address will not be published. Required fields are marked *