ಸಾಮಾನ್ಯವಾಗಿ ಸ್ನೇಹಿತರ ಬಳಿ ತಮ್ಮ ತಮ್ಮ ಕಷ್ಟ ಸುಖಗಳು, ದುಖಃ ದುಮ್ಮಾನಗಳು, ಸಂತೋಷಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ನೋಡಿದ್ದೇವೆ. ಇನ್ನೂ ಸ್ನೇಹಿತರು, ಪ್ರಿಯಕರ ಅಂದಾಗ ಅಲ್ಲಿ ಇಲ್ಲಿ ಸುತ್ತಾಡೋದು, ಸಂತೋಷ, ದುಖಃವಾದಾಗ, ಬರ್ತಡೆ ಇದ್ದಾಗ ಪಾರ್ಟಿ ಮಾಡೋದು ಸಹಜ. ಆದ್ರೆ, ಬೆಂಗಳೂರಿನಲ್ಲಿ ಈ ಪಾರ್ಟಿ ತಮ್ಮ ತಮ್ಮ ಗರ್ಲ್‌ಫ್ರೆಂಡ್‌ಗಳನ್ನೇ ಎಕ್ಸ್‌ಚೇಂಜ್ ಮಾಡೋ ಮಟ್ಟಿಗೆ ತಲುಪಿದೆ.
ಯುವತಿಯನ್ನ ಸ್ನೇಹಿತನ ಜೊತೆಗೆ ಸಹಕರಿಸುವಂತೆ ಬಲವಂತವಾಗಿ ಒತ್ತಾಯಿಸಿರುವ ಆರೋಪ ಕೇಳಿಬಂದಿದೆ. ಒಪ್ಪದಿದ್ದ ಕಾರಣಕ್ಕೆ ಪರಿಚಯಸ್ಥ ಯುವತಿಯನ್ನು ಸ್ನೇಹಿತನೊಬ್ಬ ತನ್ನ ಇತರ ಫ್ರೆಂಡ್ಸ್ ಜೊತೆ ಸೇರಿಕೊಂಡು ಅತ್ಯಾಚಾರ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಸದ್ಯ ಕರಾಳ ದಂಧೆ ನಡೆಸುತ್ತಿದ್ದ ಆರೋಪಿಗಳಾದ ಹರೀಶ್ ಮತ್ತು ಹೇಮಂತ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಅಸಲಿಗೆ ಹರೀಶ್ ಎಂಬಾತ ಈ ನೊಂದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಆಕೆ ಮತ್ತು ಹರೀಶ್ ಜೋಡಿ ಹಕ್ಕಿಯಂತೆ ಎಲ್ಲಾ ಕಡೆ ಸುತ್ತಾಡಿದ್ದಲ್ಲದೇ, ಆತ ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಬರಬರುತ್ತಾ ಹರೀಶ್ ತನ್ನ ಅಸಲು ಮುಖ ತೋರಿಸಿದ್ದಾನೆ.
ವಾಟ್ಸಾಪ್ ಗ್ರೂಪ್ ಒಂದನ್ನು ‘ಸ್ವಿಂಗರ್ಸ್’ ಟೀಂ ಎಂದು ಮಾಡಿಕೊಂಡಿತ್ತು. ಇದರಲ್ಲಿ ಹರೀಶ್ ಕೂಡಾ ಇದ್ದ ಎನ್ನಲಾಗಿದೆ. ಇನ್ನು ಈ ಗ್ರೂಪ್ ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿತ್ತು. ಈ ಪಾರ್ಟಿಯಲ್ಲಿ ಹರೀಶ್ ಮತ್ತು ಹೇಮಂತ್ ಇಬ್ಬರೂ ಬರುತ್ತಿದ್ದರು. ಅಲ್ಲದೆ ಹುಡುಗಿಯರನ್ನು ಕರೆದುಕೊಂಡು ಬಂದು ಇಲ್ಲಿ ಪರಸ್ಪರ ಎಕ್ಸ್‌ಚೇಂಜ್ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇಲ್ಲಿ ಗರ್ಲ್‌ಫ್ರೆಂಡ್ ಎಕ್ಸ್‌ಚೇಂಜ್, ಪಾರ್ಟಿಗೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಿಗೆ ಒಬ್ಬನ ಗರ್ಲ್‌ಫ್ರೆಂಡ್ ಇಲ್ಲಿ ಮತ್ತೊಬ್ಬನ ಜೊತೆ ಬೆಡ್ ಶೇರ್ ಮಾಡಬೇಕಿತ್ತು.
ಇದೇ ರೀತಿ ಹರೀಶ್ ಎಂಬಾತ ತನ್ನ ಸ್ನೇಹಿತೆಯನ್ನ ಇನ್ನೊಬ್ಬನೊಂದಿಗೆ ಸಹಕರಿಸುವಂತೆ ಹೇಳಿದ್ದಾನೆ ಎಂದು ಹೇಳಲಾಗಿದೆ. ಆದ್ರೆ ಇದನ್ನು ನಿರಾಕರಿಸಿದ ಯುವತಿಯನ್ನ, ತನ್ನ ಸ್ನೇಹಿತೆ ಅಂತಾನೂ ನೋಡದೆ ಬೇರೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದಾನೆಂದು ಯುವತಿ ಆರೋಪಿಸಿದ್ದಾಳೆ ಎನ್ನಲಾಗಿದೆ.
ಇನ್ನು ಈ ವಿಷಯದಿಂದ ಬೇಸತ್ತ ಯುವತಿ ಸಿಸಿಬಿಗೆ ದೂರು ನೀಡಿದ್ದಾಳೆ. ತಕ್ಷಣ ಎಚ್ಚೆತ್ತ ಪೊಲೀಸರು ಹರೀಶ್ ಮತ್ತು ಹೇಮಂತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ತನಿಖೆ ನಡೆಸುತ್ತಿದ್ದು, ಈ ವೇಳೆ ಮೊಬೈಲ್‌ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೇ ಹುಡುಗಿಯರು ಏಕಾಂತದಲ್ಲಿದ್ದ ವಿಡಿಯೋ ಮಾಡಿಟ್ಟುಕೊಂಡು, ಅದನ್ನೇ ತೋರಿಸಿ ಬ್ಲ್ಯಾಕ್ ಮೇಲ್ ಮಾಡ್ತಿರೋದಾಗಿಯು ತಿಳಿದುಬಂದಿದೆ.