ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೆಡಿಕವರ್ ಆಸ್ಪತ್ರೆ, ಬೆಂಗಳೂರು ವಿಶೇಷ 1,947ರ ಆರೋಗ್ಯ ಪ್ಯಾಕೇಜ್

ಬೆಂಗಳೂರು,ವೈಟ್‌ ಫಿಲ್ದ್‌ : ಮೆಡಿಕವರ್ ಆಸ್ಪತ್ರೆ, ಬೆಂಗಳೂರು, 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಪ್ಯಾಕೇಜ್‌ನೊಂದಿಗೆ ಆಚರಿಸುತ್ತಿದೆ. ಈ ಪ್ಯಾಕೇಜ್‌ನ್ನು ಭಾರತದ ಸ್ವಾತಂತ್ರ್ಯದ ವರ್ಷವನ್ನು ಸ್ಮರಿಸುವ ಸಲುವಾಗಿ 1,947 ರೂಪಾಯಿಗೆ ಕ್ಕೆ
ನೀಡಲಾಗುತ್ತಿದೆ.

ಈ ಪ್ಯಾಕೇಜ್‌ನಲ್ಲಿ ಪ್ರಮುಖ ತಜ್ಞರಿಂದ ಉಚಿತ ಸಲಹೆ ಹೃದಯ ತಜ್ಞ, ಸಾಮಾನ್ಯ ವೈದ್ಯ, ಸ್ತ್ರೀರೋಗ ತಜ್ಞ, ಎಲುಬು ತಜ್ಞ, ಸಾಮಾನ್ಯ ಶಸ್ತ್ರಚಿಕಿತ್ಸಕ — ಜೊತೆಗೆ ಡಯಾಗ್ನೋಸ್ಟಿಕ್‌ ಪರೀಕ್ಷೆಗಳಿಗೆ 50% ರಿಯಾಯಿತಿ ಒಳಗೊಂಡಿದೆ. ಈ ವಿಶೇಷ ಆಫರ್ ಆಗಸ್ಟ್ 15 ರಿಂದ ಸೆಪ್ಟೆಂಬರ್‌ 15 ರೆವೆರೆಗೆ ಬೆಂಗಳೂರು ಮೆಡಿಕವರ್ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.

ಸ್ವಾತಂತ್ರ್ಯ ದಿನಾಚರಣೆ ನಮ್ಮ ದೇಶದ ಹಬ್ಬ, ಆದರೆ ಉತ್ತಮ ಆರೋಗ್ಯವೇ ಬದುಕನ್ನು ಸಂಪೂರ್ಣವಾಗಿ ಅನುಭವಿಸುವ ಮೂಲ ಆಸ್ತಿಯಾಗಿದೆ . 1,947ರ ವಿಶೇಷ ಪ್ಯಾಕೇಜ್‌ ನಮ್ಮ ದೇಶ ಸ್ವಾತಂತ್ರ್ಯ ಪಡೆದ ವರ್ಷದ ಸಂಕೇತವಾಗಿದ್ದು, ಜನರು ಆರೋಗ್ಯ ತಪಾಸಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಪ್ರೇರಣೆ ನೀಡುತ್ತದೆ” ಎಂದು ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಹೇಳಿದರು.

ಮೆಡಿಕವರ್ ಆಸ್ಪತ್ರೆಯ ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಬೆಂಗಳೂರಿನ ಜನರನ್ನು ಆರೋಗ್ಯಕರ ಜೀವನದತ್ತ ತ್ವರಿತ ಹೆಜ್ಜೆ ಇಡುವಂತೆ ಪ್ರೋತ್ಸಾಹಿಸುತ್ತದೆ.

Leave a Reply

Your email address will not be published. Required fields are marked *

error: Content is protected !!