ಸ್ಲೋಚ್ ಕ್ಯಾಪ್ ಗೆ ವಿದಾಯ: ನೀಲಿ ಬಣ್ಣದ ಪೀಕ್ ಕ್ಯಾಪ್ ಧರಿಸಿ ಮಿಂಚಿದ ಬೆಂ ಗ್ರಾ ಜಿಲ್ಲಾ ಪೊಲೀಸ್ ಸಿಬ್ಬಂದಿ

1956ರ ದಶಕದಿಂದಲೂ ಪೊಲೀಸರು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಗೆ ವಿದಾಯ ಹೇಳುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಕರ್ನಾಟಕ ಪೊಲೀಸರು ಇನ್ನು ಮುಂದೆ ಹೊಸ ರೂಪದ ನೀಲಿ ಬಣ್ಣದ ಪೀಕ್ ಕ್ಯಾಪ್ ಧರಿಸುತ್ತಾರೆ. ಈ ಮೂಲಕ ಪೊಲೀಸರ ಸ್ಲೋಚ್ ಕ್ಯಾಪ್ ಇತಿಹಾಸದ ಪುಟ ಸೇರಿದೆ.

ಇಂದು ಮಾದನಾಯಕನಹಳ್ಳಿ BIEC ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಅವರು ಪೊಲೀಸ್ ಸಿಬ್ಬಂದಿಗೆ ಹೊಸ ಕ್ಯಾಪ್ ವಿತರಣೆ ಮಾಡಿದರು. ಬಳಿಕ ಪೊಲೀಸರು ಹೊಸ ಟೋಪಿ ಧರಿಸಿ ಮಿಂಚಿದರು.

1956ರಿಂದ ಟರ್ಬನ್ ಕ್ಯಾಪ್, ಸ್ಲೋಚ್ ಕ್ಯಾಪ್ ಚಾಲ್ತಿಯಲ್ಲಿತ್ತು. ಆದ್ರೆ, 2018ರಲ್ಲೇ ಕ್ಯಾಪ್ ಬದಲಾವಣೆಗೆ ಪ್ರಕ್ರಿಯೆ ಶುರುವಾದರೂ ಅದು ನನೆಗುದಿಗೆ ಬಿದ್ದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರೇ ವೈಯಕ್ತಿಕ ಆಸಕ್ತಿ ವಹಿಸಿ, ಇಲಾಖೆಯ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ನೀಲಿ ಬಣ್ಣದ ಹೊಸ ಪೀಕ್ ಕ್ಯಾಪ್ ಅನ್ನು ಸಿಎಂ ಸಿದ್ದರಾಮಯ್ಯ ಅವರೇ ಸೆಲೆಕ್ಟ್ ಮಾಡಿದ್ದರು. ಈ ಮೂಲಕ ಪೊಲೀಸರ ಬಹುದಿನಗಳ ಬೇಡಿಕೆ ಈಡೇರಿದೆ.

Leave a Reply

Your email address will not be published. Required fields are marked *

error: Content is protected !!