ಡಾ.ಬಿ.ಅರ್ ಅಂಬೇಡ್ಕರ್ ರವರ 68ನೇ ಪರಿನಿಬ್ಬಾಣದ ಅಂಗವಾಗಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ರೋಜಿಪುರ ಸ್ಮಶಾನದಲ್ಲಿ ಬಿರಿಯಾನಿ ಊಟ ಮಾಡಿ ಮೌಢ್ಯವಿರೋಧಿ ದಿನಾಚರಣೆಯನ್ನು ಮಾಡಲಾಯಿತು.
ಮೌಢ್ಯವಿರೋಧಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಮಂಟೆದ ಭಾಗವಹಿಸಿ ಮಾತನಾಡಿದ ಅವರು, ಜನನ ಹಿಂದಿನ ಕಾಲದಿಂದಲೂ ಮೌಢ್ಯತೆ ಎಂಬುದು ಚಾಲ್ತಿಯಲ್ಲಿದೆ. ಇಂದಿನ ಆಧುನಿಕ ನಾಗರಿಕ ಸಮಾಜ ಹೆಚ್ಚು ಮೌಢ್ಯವನ್ನ ಅನುಸರಿಸುತ್ತಿರುವುದು ನೋವಿನ ಸಂಗತಿ. ಮೌಢ್ಯತೆ ಇವತ್ತು ಫ್ಯಾಷಿನೇಶ್ ಆಗುತ್ತಿದೆ. ಸಾಮಾಜಿಕ ತಂತ್ರಜ್ಞಾನ ಸಹ ಮೌಢ್ಯತೆಯನ್ನ ಬಿತ್ತುವ ಮಾಧ್ಯಮಗಳಾಗಿವೆ. ಇದರಿಂದ ಮತ್ತೆ ಸಮಾಜ ಮೌಢ್ಯತೆಯ ಕಡೆ ಹೊರಳುತ್ತಿದೆ. ಮೌಢ್ಯ ಹೋಗಲಾಡಿಸಿ ವೈಚಾರಿಕ ಪ್ರಜ್ಞೆ ಜನರಲ್ಲಿ ಬಿತ್ತಲು ಮೌಢ್ಯ ವಿರೋಧಿ ದಿನಾಚರಣೆಯಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಜನರಲ್ಲಿ ಅರಿವು ಮತ್ತು ಪ್ರಜ್ಞೆಯನ್ನ ಬಿತ್ತಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಸಮಾಜದ ಆರೋಗ್ಯವನ್ನ ಕಾಪಾಡಬೇಕು. ಅಜ್ಞಾನವನ್ನ ತೊಲಗಿಸಬೇಕೆಂಬ ಕಾರಣಕ್ಕೆ ಸಮಾನ ಮನಸ್ಕರು ಸೇರಿ ಪ್ರತಿ ವರ್ಷ ಈ ಮೌಢ್ಯ ವಿರೋಧಿ ದಿನಾಚರಣೆ ಮಾಡಲಾಗುತ್ತಿದೆ. ಮೌಢ್ಯತೆಯಿಂದ ದೂರವಾಗಿ ಶೂನ್ಯತ್ವದ ಕಡೆ ಹೋಗುವುದನ್ನೇ ಬೌದ್ಧ ದಮ್ಮದಲ್ಲಿ ಪರಿನಿಬ್ಬಾಣ ಎಂದು ಕರೆಯಲಾಗುತ್ತದೆ ಎಂದರು.
ಉದ್ಯಮಿ ರಾಜ್ ಗೋಪಾಲ್ ಮಾತನಾಡಿ, ಹಲವು ರೀತಿಯ ಮೌಢ್ಯತೆಗಳಿಗೆ ನಮಗೆ ಅರಿವಿಲ್ಲದೆಯೇ ನಾವು ಬಲಿಯಾಗಿದ್ದೇವೆ, ಆಧುನಿಕ ಕಾಲದಲ್ಲಿ ವಿಜ್ಞಾನ- ತಂತ್ರಜ್ಞಾನವು ಎಷ್ಟೇ ಮುಂದುವರೆದಿದ್ದರು ಸಹ ಇಂದಿಗೂ ಮೌಡ್ಯತೆ ನಂಬುವ, ಪಾಲಿಸುವ ಯುವ ಸಮುದಾಯ ನಮೊಟ್ಟಿಗಿರುವುದು ವಿಪರ್ಯಾಸವೇ ಸರಿ, ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಯುವ ಸಮುದಾಯವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ , ಸಂಜೀವ್ ನಾಯಕ , ಸೊಣ್ಣಪನಹಳ್ಳಿ ರಮೇಶ್, ವಿ.ವೆಂಕಟೇಶ್, ಅಶೋಕ, ಮುನಿರಾಜು, ಮಲ್ಲರಾಜು, ರಾಜಣ್ಣ ಏಕಾಶಿಪುರ, ತಳಗವಾರ ಪುನೀತ್, ತಳಗವಾರ ಸುರೇಶ್, ವಡ್ಡರಹಳ್ಳಿ ರಾಜಶೇಖರ್, ರತ್ನಮ್ಮ, ಗುರುಪ್ರಸಾದ್, ಹನುಮಣ್ಣ, ರಾಜುಸಣ್ಣಕ್ಕಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…
ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…
ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…
ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…
View Comments
ಸರಿ ಇಲ್ಲದ ಮಾಡುವುದು ಸರಿಯೆ ಆದರೆ ಈ ದೇಶದ ಮೊದಲು ನಮ್ಮ ದಲಿತರು ಜನಗಳು ಒಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅದೇ ಮಡಿಕೆ ಅದೇ ಪರಕೆ ಹಿಡಿಯಬೇಕಾಗುತ್ತದೆ ದಯವಿಟ್ಟು ಎಚ್ಚೆತ್ತುಕೊಳ್ಳಿ ನಾವು ಜೈ ಭೀಮ್ ಮಕ್ಕಳು ಸರ್ ರಮೇಶ್ ಎನ್ ಎಂ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಪೋಸ್ಟ್ ನಾಗನಾಯಕನಹಳ್ಳಿ ಗ್ರಾಮ 7829098967 ನಮ್ಮ ಕರ್ನಾಟಕದಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಾಹೇಬರ ಪುತ್ಥಳಿ ಶಂಕುಸ್ಥಾಪನೆ ನೆರವೇರಿಸಿ ಎಂದು ನಿಮ್ಮಲ್ಲಿ ಮನವರಿಕೆ ಮಾಡುತ್ತೇವೆ ಸರ್