ಸ್ನೇಹ… ಪ್ರೀತಿ… ಅತ್ಯಾಚಾರ… ದೋಖಾ…ಆರೋಪ! ಲೈಂಗಿಕ ಸಂಪರ್ಕಕ್ಕೆ ಅಡ್ಡಿಯಾಗದ ಜಾತಿ, ಮದುವೆಗೆ ಅಡ್ಡಿ: ಅತ್ಯಾಚಾರ ಹಾಗೂ ಜಾತಿ ನಿಂದನೆ ದೂರು ನೀಡಿ, ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋದ ಯುವತಿ

ಮೊಬೈಲ್ ಬಳಸುವ ಯುವತಿಯರೇ ಎಚ್ಚರ… ಎಚ್ಚರ… ಅದರಲ್ಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಯುವಕರ ಸ್ನೇಹ ಬೆಳೆಸುವ ಮುನ್ನ ‘ಬಿ ಕೇರ್ ಫುಲ್’ ಏಕೆಂದರೆ, ಹೀಗೆ… ಯುವತಿಗೆ ಇಂಸ್ಟ್ರಾಗ್ರಾಮ್ ನಲ್ಲಿ ಯುವಕನೋರ್ವ ಪರಿಚಯವಾಗುತ್ತಾನೆ.. ನಂತರ ಸೊಂಡೆಕೊಪ್ಪದಲ್ಲಿ ಯುವತಿ ದಿನಸಿ ಸಾಮಗ್ರಿ ತರಲು ಬಂದಿರುತ್ತಾಳೆ. ಅದೇ ಸಮಯದಲ್ಲಿ ಈ ಯುವಕನೂ ಬಂದು ಯುವತಿ ಬಳಿ ಮೊಬೈಲ್ ನಂಬರ್ ಪಡೆದು ಫೋನ್ ಕಾಲ್, ಮೆಸೇಜ್ ಮಾಡಲು ಶುರು ಮಾಡುತ್ತಾನೆ. ಚಿನ್ನಾ, ರನ್ನ, ಬಂಗಾರದ ಮಾತಿಗೆ ಮರುಳಾದ ಯುವತಿಗೆ ನಿರಂತರ  ಅತ್ಯಾಚಾರವೆಸಗಿ ಜಾತಿ ನೆಪವೊಡ್ಡಿ ಮದುವೆಯಾಗದೇ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ…

ಯುವತಿಗೆ ವಂಚನೆ ಮಾಡಿರುವ ಯುವನ ಹೆಸರು ಶ್ರೀಕಾಂತ್.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಾವರೆಕೆರೆ ಸಮೀಪದ ಹೊಸಪಾಳ್ಯ ಗ್ರಾಮದವನು. ಚಿನ್ನ ರನ್ನ, ಮುದ್ದು ಎಂದು ಮಾತಾಡಿ, ಯುವತಿಗೆ ಮದುವೆ ಆಗುತ್ತೇನೆ ಎಂದು ನಂಬಿಸಿ, ಆಗಾಗ ಲಾಡ್ಜ್ ಗಳಿಗೆ ಕರೆದುಕೊಂಡು ಬಂದು ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಆದರೆ, ಇದೀಗ ದೈಹಿಕ ಸಂಕರ್ಪಕಕ್ಕೆ ಅಡ್ಡಿಬಾರದ ಜಾತಿ, ಮದುವೆ ಆಗಲು ಅಡ್ಡಿ ಬಂದಿದೆ. ನೀನು ಕೆಳ ಜಾತಿಯವಳು, ನಾನು ಮದುವೆ ಆಗಲ್ಲ ಎಂದು ನಿರಾಕರಿಸಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ…

ಇನ್ನೂ, ಯುವತಿ ನ್ಯಾಯ ಬೇಡಿ ನೆಲಮಂಗಲ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಈ ವೇಳೆ ಯುವತಿ ಪೋಷಕರು, ಪೊಲೀಸ್ ಅಧಿಕಾರಿಗಳು ಯುವತಿಯನ್ನು ಮದುವೆ ಆಗುವಂತೆ ಯುವಕನಿಗೆ ಹೇಳಿದ್ದಾರೆ. ಆದರೆ, ಯುವಕ ನಾನು ಜೈಲಿಗೆ ಹೋದರೂ ಪರವಾಗಿಲ್ಲ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದ್ದಾನೆ ಎನ್ನಲಾಗಿದೆ.

ಅನೇಕ ಬಾರಿ ಯುವತಿಯನ್ನು ಬಳಕೆ ಮಾಡಿಕೊಂಡು, ಗರ್ಭಪಾತ ಕೂಡ ಮಾಡಿಸಿದ್ದಾನೆ ಎಂದು ಯುವತಿ ಪೋಷಕರು ಆರೋಪ ಮಾಡಿದ್ದಾರೆ. ಕೊನೆಗೆ ಮದುವೆ ಆಗಲು ಯುವಕ ಒಪ್ಪದ ಕಾರಣ ಯುವತಿ ಅತ್ಯಾಚಾರ ಮತ್ತು ಜಾತಿ ನಿಂದನೆಯ ದೂರು ನೀಡಿದ್ದಾಳೆ. ಹಾಗಾಗಿ ನೆಲಮಂಗಲ ನಗರ ಪೊಲೀಸರು ಯುವಕನ್ನು ವಶಕ್ಕೆ ಪಡೆದು, ಯುವಕ  ಹೋಗಿ ಬರುತ್ತಿದ್ದ ಲಾಡ್ಜ್ ಗಳ ಸ್ಥಳ ಮಹಜರು ಮಾಡಿದ್ದಾರೆ.

ಒಟ್ಟಾರೆ ಯುವಕನನ್ನ ನಂಬಿ ಮೋಸ ಹೋದ ಯುವತಿ ದಿಕ್ಕು ತೋಚದಂತೆ ಆಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿ ಪ್ರೀತಿ ಪ್ರೇಮ ಎಂದು ಜೀವನ ಹಾಳು ಮಾಡಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಇರಬೇಕಾಗಿದ ಅನಿವಾರ್ಯತೆ ಯುವತಿಯರಿಗೆ ಇದೆ.

One thought on “ಸ್ನೇಹ… ಪ್ರೀತಿ… ಅತ್ಯಾಚಾರ… ದೋಖಾ…ಆರೋಪ! ಲೈಂಗಿಕ ಸಂಪರ್ಕಕ್ಕೆ ಅಡ್ಡಿಯಾಗದ ಜಾತಿ, ಮದುವೆಗೆ ಅಡ್ಡಿ: ಅತ್ಯಾಚಾರ ಹಾಗೂ ಜಾತಿ ನಿಂದನೆ ದೂರು ನೀಡಿ, ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋದ ಯುವತಿ

  1. ಇಂತಹ ಕಚಡಾ *** ಮಕ್ಕಳು ಇರುವ ತನಕ ಜಾತಿ ವ್ಯವಸ್ಥೆ ದೂರವಾಗಲ್ಲ
    ಇವನಿಗೆ ತಕ್ಕ ಶಿಕ್ಷೆ ಆಗಬೇಕು.
    ಹೆಣ್ಣುಮಕ್ಕಳು ಅಷ್ಟೇ ಬೇಗ ಏಕೆ ಧ್ಯಹಿಕ ಸಂಪರ್ಕ ಬೆಳಸಬೇಕು ಇವರುದು ತಪ್ಪಿದೆ ಅದಕ್ಕೆ ಅನುಭವಿಸಲಿ

Leave a Reply

Your email address will not be published. Required fields are marked *

error: Content is protected !!