ಆಕೆ ಗಂಡನ ಜೊತೆಯಲ್ಲಿ ಶುಭ ಕಾರ್ಯಕ್ಕೆ ಎಂದು ತಮಿಳುನಾಡಿನಿಂದ ಬಂದಿದ್ದಾಳೆ. ಗಂಡನ ಸ್ನೇಹಿತರ ಮನೆಗೆ ಹೋಗಿ ರೆಡಿ ಹಾಗಿ ಶುಭ ಕಾರ್ಯಕ್ಕೆ ಹೋಗಬೇಕು ಎಂದು ಸ್ನಾನದ ಗೃಹಕ್ಕೆ ಹೋದವಳು ಈಚೆ ಬಂದಿದ್ದು ಮಾತ್ರ ಹೆಣವಾಗಿ. ಅಷ್ಟಕ್ಕೂ ಆ ಮಹಿಳೆ ಸಾವನಪ್ಪಿದ್ದು ಯಾಕೆ ಅಂತಿರಾ ಈ ಸ್ಟೋರಿ ನೋಡಿ……
ಸಾವನ್ನಪ್ಪಿರುವ ಮಹಿಳೆಯ ಹೆಸರು ಲಕ್ಷ್ಮೀ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೇಪೇಟೆಯಲ್ಲಿ ನಿನ್ನೆ ಸಾವನಪ್ಪಿದ್ದಾಳೆ. ತಿರುಪತಿಯಿಂದ ಮಲ್ಲೇಶ್ವರಂ ನಲ್ಲಿ ಕಾರ್ಯಕ್ರಮ ನಿಮಿತ್ತ ಸಂಬಂಧಿಕರ ಮನೆಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಸ್ನಾನಕ್ಕೆ ಎಂದು ಸ್ನಾನಗೃಹದಲ್ಲಿ ಹೆಣವಾಗಿ ಬಿದ್ದಿದ್ದಾಳೆ. ಆದರೆ, ಸ್ನಾನಕ್ಕೆ ಹೋಗುವ ವೇಳೆ ಆಕೆಯ ಮುಖದಲ್ಲಿ ಯಾವುದೇ ರೀತಿಯ ಗಾಯಗಳು ಇರುವುದಿಲ್ಲ. ಆದರೆ ಸ್ನಾನ ಗೃಹದಲ್ಲಿ ಬಿದ್ದಿದಾಗ ಆಕೆಯ ಮುಖದ ಮೇಲೆ ಗಾಯಗಳಾಗಿದ್ದವು. ಆಕೆಯ ಮುಖದ ಮೇಲೆ ಗಾಯಗಳು ಹೇಗಾದವು ಎಂಬುದೇ ಗಂಡನ ಅನುಮಾನವಾಗಿದೆ.
ಇನ್ನೂ ಸ್ಥಳಕ್ಕೆ ನೆಲಮಂಗಲ ನಗರ ಪೊಲೀಸರು ಭೇಟಿ ನೀಡಿ, ಪ್ರಾಥಮಿಕ ತನಿಖೆಯನ್ನು ಮಾಡುತ್ತಿದ್ದಾರೆ. ತನಿಖೆಯ ವೇಳೆ ಗೀಸರ್ ಆನ್ ಆಗಿಲ್ಲ, ಬಕೆಟ್ ನಲ್ಲಿ ನೀರು ಇರಲಿಲ್ಲ ಎಂದು ಮೃತ ಲಕ್ಷ್ಮೀಯ ಗಂಡ ಪೊಲೀಸರಿಗೆ ಮಾಹಿತಿ ನೀಡಿದ ಎನ್ನಲಾಗಿದೆ.
ಹೀಗಾಗಿ ಮನೆಯ ಮಾಲೀಕರ ಜೊತೆಗೆ ಗಂಡನ ಹೇಳಿಕೆಯನ್ನು ಪಡೆದು ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.
ಇನ್ನೂ ನೆಲಮಂಗಲದ ಶವಾಗಾರದಲ್ಲಿ ಶವಪರೀಕ್ಷೆ ಆಗಿದ್ದು, ಮೃತಳ ಗಂಡನ ಸ್ವಗ್ರಾಮದಲ್ಲಿ ಮಹಿಳೆ ಅಂತಿಮ ಶವಸಂಸ್ಕಾರ ಮಾಡಲಾಗಿದೆ.
ಒಟ್ಟಾರೆ, ಶುಭ ಕಾರ್ಯಕ್ಕೆ ಹೋಗಬೇಕು ಎಂದು ಬಂದವಳು ಹೆಣವಾಗಿ ಸ್ವಾಗ್ರಾಮಕ್ಕೆ ವಾಪಸ್ ಆಗಿದ್ದಾಳೆ. ಆದರೆ, ಆಕೆಯ ಸಾವು ಮಾತ್ರ ನಿಗೂಢವಾಗಿದೆ. ಮಹಿಳೆಯ ಸಾವಿಗೆ ಸೂಕ್ತ ಕಾರಣ ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ…
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…
ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದು*ರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…
2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…