ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ಹಾವಿನ ಮರಿಗಳು ಮನೆಯೊಂದರ ಸ್ನಾನದ ಗೃದಹಲ್ಲಿ ಕಂಡುಬಂದಿದ್ದು, ಸ್ನಾನಗೃಹದಲ್ಲಿ ಹಾವುಗಳನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಾಗಾಂವ್‌ನ ಉಪವಿಭಾಗದ ಪಟ್ಟಣವಾದ ಕಲಿಯಾಬೋರ್‌ನಲ್ಲಿ ಈ ಘಟನೆ ನಡೆದಿದೆ.
30 ಕ್ಕೂ ಹೆಚ್ಚು ಹಾವಿನ ಮರಿಗಳು ಮನೆಯಿಂದ ಹೊರಬರುತ್ತಿರುವ ವಿಡಿಯೊ ಫುಲ್ ವೈರಲ್ ಆಗಿದೆ.
ಹಾವುಗಳನ್ನ ಕಂಡು ಗಾಬರಿಗೊಂಡ ವ್ಯಕ್ತಿ ಹತ್ತಿರದವರಿಗೆ ಕರೆ ಮಾಡಿ.. ಸ್ಥಳೀಯ ಹಾವು ಹಿಡಿಯುವವರಿಗೆ ಮಾಹಿತಿ ನೀಡಿ, ಬಂದು ನೀರಿನ ತೊಟ್ಟಿಯನ್ನು ತೆರೆದು ನೋಡಿದಾಗ ಅದರಲ್ಲಿ ಹಾವುಗಳ ಗುಂಪುಗಳಿದ್ದವು. ಕೂಡಲೇ ಹಾವುಗಳನ್ನು ಸ್ಥಳಾಂತರಿಸಲಾಯಿತು.