ಬೆಂಗಳೂರು : ಉದ್ಯಾನ ನಗರಿ ಕ್ರಿಕೆಟ್ ಪ್ರೇಮಿಗಳಿಗೆ ಎರಡೂ ತಂಡಗಳು ರನ್‌ಗಳ ರಸದೌತಣ ಉಣಬಡಿಸಿದರು, ಪ್ರತೀ ಎಸೆತಕ್ಕೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ವಿಜಯಲಕ್ಷ್ಮಿ ಕನ್ನಡಿಗ ಕೆ. ಎಲ್. ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೆಂಟ್ಸ್ ಪಾಲಾಯಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಕೆ. ಎಲ್. ರಾಹುಲ್ ಅವರ ನಿರ್ಧಾರ ಕೈಗೂಡಲಿಲ್ಲ ಕೇವಲ ಎರಡು ವಿಕೆಟ್ ನಷ್ಟಕ್ಕೆ ಆರ್ ಸಿಬಿ ಬರೋಬ್ಬರಿ 213 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ ಎದುರಾಳಿಗಳನ್ನು ಆಹ್ವಾನಿಸಲಾಯಿತು.
ಬೃಹತ್ ಮೊತ್ತ ಬೆನ್ನಟ್ಟಿದ ಲಕ್ನೋಗೆ ಆರಂಭಿಕ ಲಕ್ ಸಿಗಲಿಲ್ಲ ಆರಂಭಿಕ ಬ್ಯಾಟ್ಸ್‌ಮನ್ ಕೈಲ್ ಮೇಯರ್ಸ್ (0) ಸಿರಾಜ್ ಎಸೆದ ಬಾಲ್ ಕೆಣಕಲು ಹೋಗಿ ಕ್ಲೀನ್ ವಿಕೆಟ್ ಆದರು, ನಂತರ ಬಂದ ಆಲ್ ರೌಂಡರ್ ದೀಪಕ್ ಹೂಡ (9) ಹಾಗೂ ಕೃನಾಲ್ ಪಾಂಡ್ಯ (0) ಪ್ಯಾರಲಲ್ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ಮಾರ್ಕ್ ಸ್ಟೋನಿಸ್ ಆರು ಬೌಂಡರಿ ಹಾಗೂ ಐದು ಸಿಕ್ಸರ್ ಸಮೇತ (65) ರನ್ ಪೇರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರು, ನಂತರ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ 19 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಏಳು ಸಿಕ್ಸರ್ ಸಿಡಿಸಿ ಬರೋಬ್ಬರಿ (62) ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಇಂಪ್ಯಾಕ್ಟ್ ಪ್ಲೇಯರ್ ಯುವ ಬ್ಯಾಟ್ಸ್‌ಮನ್ ಆಯಷ್ ಬದೋನಿ ನಾಲ್ಕು ಬೌಂಡರಿ ಸಮೇತ (30) ರನ್ ಹಾಗೂ ಜಯದೇವ್ ಉನ್ನಾದ್ಕತ್ (9) ಗೆಲುವಿನ ದಡ ಸೇರಿಸಿದರು. ಆರ್ ಸಿಬಿ ಪರವಾಗಿ ಮೊಹಮ್ಮದ್ ಸಿರಾಜ್ ಹಾಗೂ ಪ್ಯಾರಲಲ್ ಮೂರು ವಿಕೆಟ್ ಪಡೆದರೆ ಹಷ೯ಲ್ ಪಟೇಲ್ ಎರಡು ವಿಕೆಟ್ ಪಡೆದು ಮಿಂಚಿದರು.
ಕೋಹ್ಲಿ- ಪಾಫ್ – ಮ್ಯಾಕ್ಸಿ ಬ್ಯಾಟಿಂಗ್ ಅಬ್ಬರ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆ ರನ್ ಹೊಳೆ ಹರಿಸಿದರು ಆರಂಭಿಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (61) ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸಿದರೆ, ನಾಯಕ ಪಾಫ್ ಡುಪ್ಲೆಸಿ ಔಟಾಗದೆ ಐದು ಬೌಂಡರಿ ಹಾಗೂ ಐದು ಸಿಕ್ಸರ್ ಸಮೇತ 79 ರನ್ ಗಳಿಸಿದರು.
ಅಮಿತ್ ಮಿಶ್ರಾ ಬೌಲಿಂಗ್ ನಲ್ಲಿ ಸ್ಟೋನಿಸ್ ಹಿಡಿದ ಕ್ಯಾಚ್ ಗೆ ಬಲಿಯಾದ ವಿರಾಟ್ ಕೊಹ್ಲಿ ತಂಡಕ್ಕೆ ಭದ್ರ ಬುನಾದಿ ಹಾಕಿದರು, ನಂತರ ಬಂದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸವೆಲ್ ನಾಯಕ ಜೊತೆಗೆ ಬಿರುಸಿನ ಬ್ಯಾಟಿಂಗ್ ಗೆ ಮುಂದಾದರು, ಇನ್ನಿಂಗ್ಸ್ ನ ಕೊನೆಯ ಎಸೆತದವರೆಗೂ ಕ್ರಿನ್ ಲ್ಲಿದ್ದ ಮ್ಯಾಕ್ಸವೆಲ್ ಮೂರು ಬೌಂಡರಿ ಹಾಗೂ ಆರು ಸಿಕ್ಸರ್ ಸಿಡಿಸುವ ಮೂಲಕ 59 ರನ್ ಗಳಿಸಿ ತಂಡದ ಮೊತ್ತವನ್ನು 210 ರ ವರೆಗೆ ಕೊಂಡೊಯ್ದುರು.
ಬ್ಯಾಟಿಂಗ್ ನಲ್ಲಿ ಮಿಂಚಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಕೊಲಾಸ್ ಪೂರನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.