ಇಂದು ದೊಡ್ಡಬಳ್ಳಾಪುರ ನಗರದ ಕಾರ್ಮಲ್ ಜ್ಯೋತಿ ಪ್ರೌಢ ಶಾಲೆಯ ಸುಮಾರು 42 ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿನ ದೈನಂದಿನ ಚಟುವಟಿಕೆಗಳು ಹಾಗೂ ಇಲ್ಲಿನ ವ್ಯವಸ್ಥೆ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿ ಸವಿವರವಾಗಿ ತಿಳಿಸಿಕೊಟ್ಟರು.
ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂಲ ಉದ್ದೇಶ ಸಮಾಜ ಸೇವೆ ಮಾಡುವುದು. ದೇಶಭಿಮಾನ, ದೇಶಭಕ್ತಿ, ಸಂಸ್ಕಾರ, ಸಹೋದರ ಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅನಿರ್ವಾಯ ಸ್ಥಿತಿಯಲ್ಲಿ ರೋಗಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು ಹೇಗೆ, ಆಂಬುಲೆನ್ಸ್ ಸೇವೆ ಹೇಗಿರುತ್ತದೆ. ಒಳ ರೋಗಿ, ಹೋರ ರೋಗಿ ಎಂದರೇನು, ಎಕ್ಸ್ ರೇ ಕೊಠಡಿ ಹೇಗಿರುತ್ತದೆ. ಎಕ್ಸ್ ರೇ ಹೇಗೆ ತೆಗೆಯಲಾಗುತ್ತದೆ. ಔಷಧಿ ಕೊಠಡಿ, ಚುಚ್ಚುಮದ್ದು ಕೊಠಡಿ, ಚುಚ್ಚುಮದ್ದು ಹೇಗೆ ಕೊಡಬೇಕು, ವೈದ್ಯರು ರೋಗಿಗಳನ್ನು ಹೇಗೆ ಉಪಚರಿಸಬೇಕು. ಸ್ಕ್ಯಾನಿಂಗ್ ಸೆಂಟರ್, ಶುಚಿತ್ವ, ನರ್ಸ್ ಗಳ ಕೆಲಸ ಹೇಗಿರುತ್ತದೆ, ಶಸ್ತ್ರಚಿಕಿತ್ಸೆ ಹೇಗೆ ಮಾಡಲಾಗುತ್ತದೆ ಸೇರಿದಂತೆ ಇನ್ನಿತರೆ ಆಸ್ಪತ್ರೆಯ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಮಕ್ಕಳಿಗೆ ತಿಳಿಸಿಕೊಟ್ಟರು.
ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿಗಳು, ವೈದ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.