ಸ್ಕೌಟ್ಸ್ & ಗೈಡ್ಸ್ ನ ಮೊದಲ ಮುಖ್ಯ ಆಯುಕ್ತ, ಜಸ್ಟಿಸ್ ಕೆ‌. ಶಂಕರ ನಾರಾಯಣ್ ರಾವ್ ಅವರ 146ನೇ ಹುಟ್ಟುಹಬ್ಬ ಆಚರಣೆ

ದೊಡ್ಡಬಳ್ಳಾಪುರ : ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ದೇಶದ ಉಳಿವಿಗಾಗಿ ನೀವು ಪಡೆದ ತರಬೇತಿ ಸಹಕಾರಿಯಾಗಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಿಮ್ಮೆಲ್ಲರ ನಿಸ್ವಾರ್ಥ ಸೇವೆ ಸಲ್ಲಿಸುವಂತಗಲಿ ಎಂದು ಕರ್ನಾಟಕ ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಪಿ ಜಿ ಆರ್ ಸಿಂಧ್ಯಾ ಹೇಳಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಹೊರವಲಯದ ಅನಿಬಿಸೆಂಟ್ ಪಾರ್ಕ್ ನಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಯುವ ಅಪಾಯ ಮಿತ್ರ ಯೋಜನೆ ಅಡಿಯಲ್ಲಿ ಆಯೋಜನೆ ಮಾಡಲಾಗಿದ್ದ ಯುವ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಶಿಬಿರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮೊದಲ ಮುಖ್ಯ ಆಯುಕ್ತ, ಜಸ್ಟಿಸ್ ಕೆ‌. ಶಂಕರನಾರಾಯಣ್ ರಾವ್ ಅವರ 146ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ನೈಸರ್ಗಿಕ ವಿಕೋಪಗಳಿಂದ ಭಾರತವು ಹಾನಿಗೊಳಗಾದ ಸಮಯದಲ್ಲಿ ವಿಪತ್ತು ನಿರ್ವಹಣಾ ತಂಡವು ತಕ್ಷಣ ನೆರವಿಗೆ ಬರುತ್ತದೆ. 7 ದಿನಗಳಿಂದ ನಡೆದ ಈ ತರಬೇತಿಯಲ್ಲಿ ಪ್ರತಿನಿತ್ಯ ಸಹಕಾರಿಯಾಗುವ ವಿಪತ್ತು ನಿರ್ವಹಣೆಯಿಂದ ಭೂಕಂಪ, ಅಗ್ನಿ ಅನಾಹುತ, ಪ್ರವಾಹಗಳಲ್ಲಿ ಜನರನ್ನು ರಕ್ಷಣೆ ಮಾಡುವ ವಿಧಾನ ತಿಳಿಸಲಾಗಿದೆ. ಅಲ್ಲದೇ ಮಕ್ಕಳಲ್ಲಿ ದೇಶಭಿಮಾನ, ರಾಷ್ಟ್ರೀಯತೆ ಜೊತೆಗೆ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಬೆಳೆಸಲಾಗಿದೆ ಎಂದರು.

ಇಂತಹ ತರಬೇತಿ ಶಿಬಿರದಲ್ಲಿ ಭಾಗವಹಿಸುವುದರಿಂದ ಶಿಸ್ತು, ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಈ ತರಬೇತಿಯಲ್ಲಿ ಬಹುದೂರದಿಂದ ಬಂದಿರುವ    ನೂರಾರು ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷವಾಗಿದ್ದು. ಉತ್ತಮ ಜೀವನಶೈಲಿಗೆ ಇಂತಹ ತರಬೇತಿಗಳು ಅವಶ್ಯಕ ಎಂದರು.

ಸ್ಥಳೀಯವಾಗಿ ಯಾವುದೇ ನೈಸರ್ಗಿಕ ವಿಪತ್ತುಗಳ ಸಮಸ್ಯೆ ಇಲ್ಲದೆ ನಾವು ನೀವು ಸುರಕ್ಷಿತವಾಗಿ ಇದ್ದೇವೆ  ಆದರೆ ಜಮ್ಮು ಕಾಶ್ಮೀರ, ಉತ್ತಾರಾಂಚಲ್ ಹೆಚ್ಚು ವಿಪತ್ತು ಸಂಭವಿಸುತ್ತದೆ. ನಮ್ಮ ರಾಜ್ಯದ ಕೋಸ್ಟಲ್ ಏರಿಯಾಗಳಲ್ಲಿ ಆಪತ್ತು ಸಂಭಾವಿಸುವ ಪ್ರಮಾಣ ಹೆಚ್ಚಾಗಿದ್ದು ವಿಪತ್ತು ನಿರ್ವಹಣಾ ತಂಡಗಳ ಸಹಾಯದ ಅವಶ್ಯಕತೆ ಹೆಚ್ಚಿರುತ್ತದೆ ಎಂದರು.

7 ದಿನಗಳ ಕಾಲದ ತರಬೇತಿಯಲ್ಲಿ ಸುಮಾರು 400ಕ್ಕೂ ಅಧಿಕ  ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ವಿಷಯ, ನೈಸರ್ಗಿಕ ವಿಪತ್ತು ನಿರ್ವಹಣೆ ಸಂದರ್ಭಗಳಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾದದ್ದು, ಪ್ರತಿನಿತ್ಯ ಅವಶ್ಯಕವಿರುವ ತರಬೇತಿಯನ್ನು ಈ ಶಿಬಿರ ನೀಡಲಿದೆ. ಈ ತರಬೇತಿ ಪಡೆದ ಪ್ರತಿ ಮಗುವಿಗೂ ಜೀವ ವಿಮೆ ಹಾಗೂ ಉಪಯುಕ್ತ ವಿಪತ್ತು ನಿರ್ವಹಣಾ ಕಿಟ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ನ  ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!