ಆಗಸ್ಟ್ 28 ರಂದು ನಡೆಯುವ “ಚಲೋ ಬೆಳ್ತಂಗಡಿ” ಮಹಾ ಧರಣಿಗೆ ಬಲಾಢ್ಯರಿಂದ ಹತ್ಯೆಗೀಡಾದ RTI ಕಾರ್ಯಕರ್ತ ವಿನಾಯಕ ಬಾಳಿಗಾ ಸೋದರಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಧರಣಿಯಲ್ಲಿ ಭಾಗಿಗಳಾಗುವುದಾಗಿ ತಿಳಿಸಿದ್ದಾರೆ. ತಮ್ಮ ಅಣ್ಣನ ಕೊಲೆ ನಡೆಸಿದ ಪ್ರಭಾವಿ ಹಂತಕರಿಗೆ ಶಿಕ್ಷೆ ವಿಧಿಸಲು ಪಟ್ಟು ಬಿಡದೆ ಹೋರಾಡುತ್ತಿರುವ ಅನುರಾಧ ಬಾಳಿಗಾ, ಹರ್ಷ ಬಾಳಿಗಾ, ಶ್ವೇತಾ ಪೈ, ತನ್ನ ಮಗಳ ಹಂತಕರ ಪತ್ತೆಗೆ ದಶಕದಿಂದ ಹೋರಾಡುತ್ತಿರುವ ಕುಸುಮಾವತಿಯ ಪರ ನಿಂತಿದ್ದಾರೆ.
ಸಂತ್ರಸ್ತ ಹೆಣ್ಣು ಮಕ್ಕಳ ಹೋರಾಟಕ್ಕೆ ಜಯವಾಗಲಿ. ನಾವೂ ಜೊತೆ ಗೂಡೋಣ. ಆಗಸ್ಟ್ 28, 2023. ಚಲೋ ಬೆಳ್ತಂಗಡಿ ಎಂದಿದ್ದಾರೆ.