ಸೋಬಾನೆ ಹಾಡುಗಳ ಕಲಾವಿದೆಗೆ ಒಲಿದ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರ: 2023ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಸೋಬಾನೆ ಹಾಡುಗಳ ಕಲಾವಿದೆ ತಾಲ್ಲೂಕಿನ ನಾಗಸಂದ್ರ ಗ್ರಾಮದ ಓಬವ್ವ ಅವರಿಗೆ ಲಭಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಚಲಿತದಲ್ಲಿ ಇರುವ ಸೋಬಾನೆ ಪದಗಳನ್ನು ಕುಟುಂಬದಲ್ಲಿನ ಹಿರಿಯರಿಂದ ಕಲಿತಿರುವ ಓಬಮ್ಮ ಹಲವಾರು ವೇದಿಕೆಗಳಲ್ಲಿ ಹಾಡಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುವ ಜಾನಪದ ಉತ್ಸವ, ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದಲ್ಲಿನ ಉತ್ಸವ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರದ ವತಿಯಿಂದ ನಡೆದ ಶಿಬಿರಗಳಲ್ಲು ಭಾಗವಹಿಸಿ ಸೋಬಾನೆ ಪದಗಳನ್ನು ಹಾಡಿದ್ದಾರೆ.

ತಾಲ್ಲೂಕು ಕಲಾವಿದರ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶುಭ ಸಮಾರಂಭಗಳಿಂದ ಸಾವಿನ ಮನೆಯಲ್ಲಿನ ದುಖಃವನ್ನು ಮರೆಸುವವರೆಗೆ ಎಲ್ಲಾ ರೀತಿಯ ಜಾನಪದ ಗೀತೆಗಳನ್ನು ಹಾಡುವ ಓಬಮ್ಮ ಅವರ ಹಾಡು ಗಾರಿಕೆಯನ್ನು ಗುರುತಿಸಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ದೊಡ್ಡಳ್ಳಾಪುರದ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರ ಸಾಂಸ್ಕೃತಿ ಸಮಿತಿ ವತಿಯಿಂದ ಗೌರವಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!