
ಬೆಂಗಳೂರಿನ ಅಂಜನಾಪುರದಲ್ಲಿರುವ ಸೋಫಾ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 5 ಕೋಟಿ ರೂ. ಬೆಲೆ ಬಾಳುವ ಕಚ್ಚಾ ವಸ್ತು ಬೆಂಕಿಗಾಹುತಿಯಾಗಿದೆ…
ಇಂದು ಬೆಳಿಗ್ಗೆ ಸುಮಾರು 7:30ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ..ಗೋಡನ್ ನಲ್ಲಿದ್ದ ಅತ್ತಿ, ಪ್ಲೇವುಡ್, ಮತ್ತು ಹುಲ್ಲು ಇದ್ದ ಕಾರಣ ಬೆಂಕಿ ಕಾಣಿಸಿಕೊಂಡಿದೆ..
ಬೆಂಕಿ ಅವಘಡದಲ್ಲಿ ಗೋಡನ್ ಒಳಗೆ ನಿಂತಿದ್ದ 3 ಕಾರು, 2 ಗೂಡ್ಸ್ ಗಾಡಿಗಳು ಮತ್ತು ಒಂದು ಲಾರಿ ಬೆಂಕಿಗಾಹುತಿಯಾಗಿವೆ.

ಬೆಳಿಗ್ಗೆಯಿಂದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.. ಫ್ಯಾಕ್ಟರಿಯ ಸುತ್ತಮುತ್ತ ರೆಸಿಡೆನ್ಸಿಯಲ್ ಅಪಾರ್ಟಮೆಂಟ್ ಕಟ್ಟಡಗಳು ಇದ್ದು, ಬೆಂಕಿ ರಭಸಕ್ಕೆ ಅಪಾರ್ಟಮೆಂಟ್ ಕಿಟಗಿ ಗ್ಲಾಸ್ ಗಳು ಹೊಡೆಯುತ್ತಿವೆ..
ರೆಸಿಡೆನ್ಶಿಯಲ್ ಏರಿಯಾದಲ್ಲಿ ಕಮರ್ಷಿಯಲ್ ಫ್ಯಾಕ್ಟರಿಗಳಿಗೆ ಪರ್ಮಿಷನ್ ಕೊಡಬಾರದು ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…

ಬೆಂಕಿಯ ಜ್ವಾಲೆ, ದಟ್ಟಹೊಗೆ ಗಗನಕ್ಕೆ ಚಿಮ್ಮುತ್ತಿವೆ. ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ… ಸದ್ಯ ಯಾವುದೇ ಪ್ರಾಣಾಹಾನಿಯಾಗಿಲ್ಲ… ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ….