ತಾಲೂಕಿನ ಸೋತೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಿತು. ಒಟ್ಟು 11ಸದಸ್ಯ ಬಲದ ಸಂಘದಲ್ಲಿ ಒಟ್ಟು 9ಮಂದಿ ಬಿಜೆಪಿಯಿಂದ ಆಯ್ಕೆ ಆದರು.
ವೆಂಕಟರಮಣಪ್ಪ, ಚನ್ನಮ್ಮ, ದೊಡ್ಡನರಸಪ್ಪ, ಚಿಕ್ಕನರಸಪ್ಪ, ಧನಂಜಯ ಎಸ್, ಗೋವಿಂದರಾಜು, ಲಕ್ಷ್ಮೀಪತಿ, ಗಂಗರತ್ನಮ್ಮ, ಉಜಿನಮ್ಮ, ಅನಿಲ್‌ಕುಮಾರ್ ನೂತನವಾಗಿ ಆಯ್ಕೆಯಾದ ನಿರ್ದೇಶಕರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಗಣ್ಯರು ಹೂವಿನ ಹಾರ ಹಾಕಿ ಅಭಿನಂದಿಸಿದರು.
ಈ ವೇಳೆ ವೆಂಕಟೇಗೌಡ, ಚಿಕ್ಕಪಿಳ್ಳಪ್ಪ, ನರಸಪ್ಪ, ವೆಂಕಟರಂಗಯ್ಯ, ವಸಂತಗೌಡ, ಕೃಷ್ಣಪ್ಪ, ಗಜೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.