ಸೊಳ್ಳೆ ಬತ್ತಿಯಿಂದ ಅಗ್ನಿ ಅವಘಡ: ಸುಟ್ಟು ಕರಕಲಾದ ಹಣ್ಣಿನ ಅಂಗಡಿ: ನಗರದ ಚರ್ಚ್ ಬಳಿ ಘಟನೆ

ರಾತ್ರಿ ವೇಳೆ ಸೊಳ್ಳೆಗಳಿಂದ ಪಾರಾಗಲು ಹಚ್ಚಲಾಗಿದ್ದ ಸೊಳ್ಳೆ ಬತ್ತಿಯ ಕಿಡಿ ಪಕ್ಕದಲ್ಲೇ ಇದ್ದ ರಟ್ಟಿನ ಡಬ್ಬಕ್ಕೆ ತಗುಲಿ ಹೊತ್ತಿ ಉರಿದ ಹಣ್ಣಿನ ಅಂಗಡಿ. ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಹಣ್ಣಿನ ಅಂಗಡಿ. ನಗರದ ಟಿ.ಬಿ.ವೃತ್ತದ ಸಮೀಪದ ಚರ್ಚ್ ಬಳಿಯ ಹಣ್ಣಿನ ಅಂಗಡಿಯೊಂದರಲ್ಲಿ ಘಟನೆ ಸಂಭವಿಸಿದೆ.

ಸಾವಿರಾರು ರೂ. ಮೌಲ್ಯದ ಸೇಬು, ಮೂಸಂಬಿ, ಕಿತ್ತಳೆ, ಮಾವು, ದಾಳಿಂಬೆ, ದ್ರಾಕ್ಷಿ, ಬಾಳೆ ಹಣ್ಣು ಸೇರಿದಂತೆ ಇತರೆ‌ ಹಣ್ಣುಗಳು ಬೆಂಕಿಗಾಹುತಿ ಆಗಿವೆ. ಇದರಿಂದ ಅಪಾರ ನಷ್ಟಕ್ಕೆ ಒಳಗಾಗಿರುವ ಅಂಗಡಿ ಮಾಲೀಕ. ಸ್ಥಳಕ್ಕೆ ನಗರ ಠಾಣಾ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Ramesh Babu

Journalist

Recent Posts

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ?…

8 hours ago

ಅರಸೇಶ್ವರಿ ದೇವಿಯ ಜಾಗ ಖಾಸಗಿ ವ್ಯಕ್ತಿಗೆ ಖಾತೆ:ಸರ್ಕಾರಿ ಜಮೀನು ಒತ್ತುವರಿ ತೆರವು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟ‌ನೆ

ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಅರಸೇಶ್ವರಿ ದೇಗುಲದ ಇನಾಮ್ತಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ…

9 hours ago

ಕೇಬಲ್ ಕಾರ್ಖಾನೆಗೆ ಬೆಂಕಿ: ಧಗಧಗ ಉರಿಯುತ್ತಿರುವ ಕಾರ್ಖಾನೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇಬಲ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಧಗಧಗನೆ ಕಾರ್ಖಾನೆ ಉರಿಯುತ್ತಿದೆ. ಈ ಘಟನೆ ಇಂದು ಸಂಜೆ ಸುಮಾರು…

20 hours ago

ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟ ಕದ್ದೊಯ್ದ ಐನಾತಿಗಳು

ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…

23 hours ago

ಮಾರಮ್ಮ ದೇವಿಯ ಮೂರು ಚಿನ್ನದ ತಾಳಿ, ನಾಲ್ಕು ಗುಂಡುಗಳನ್ನ ಕದ್ದ ಖದೀಮರು

ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ‌ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…

1 day ago