ಸಿ ಆರ್ ಪಿ ಎಫ್ ಸಂಘ ಸ್ಥಾಪನೆಯ ಮುಖ್ಯ ಉದ್ದೇಶ ಅರೆಸೇನಾ ಪಡೆಗಳ ಹಿತರಕ್ಷಣೆ ಕಾಪಾಡುವ ಉದ್ದೇಶ ಆಗಿದೆ. ನಮ್ಮಲ್ಲಿ 1700ಕ್ಕಿಂತಲೂ ಅಧಿಕ ನಿವೃತ್ತಿ ಹೊಂದಿರುವ ಸಿಬ್ಬಂದಿ ಇದ್ದು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ನ್ಯಾಯಕ್ಕಾಗಿ ಈ ಸಂಘಟನೆ ರೂಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ನರಸಿಂಹ ರೆಡ್ಡಿ ಎಂ.ಪಿ ತಿಳಿಸಿದರು.
ಕರ್ನಾಟಕ ರಾಜ್ಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಕೇಂದ್ರ ಕಚೇರಿಯಲ್ಲಿ ಇಂದು ಸಂಘದ ರಾಜ್ಯ ಸಮಿತಿ ಸಭೆಯನ್ನು ಆಯೋಜಿಸಿ ಮಾತನಾಡಿದ ಅವರು, ದೇಶಕ್ಕೆ ಸೇನಾ ಪಡೆಗಳು ಹೇಗೆ ಸೇವೆ ಸಲ್ಲಿಸುತ್ತಿವಿಯೋ ಅದೇರೀತಿ ಅರೆಸೇನೇ ಪಡೆಗಳು ಸಹ ಅಷ್ಟೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಸೇನಾ ಪಡೆಗಳಿಗೆ ಸಿಗುವ ಸೌಲಭ್ಯ ನಮಗೂ ಸಿಗಬೇಕು ಎಂದು ಒತ್ತಾಯಿಸಿದರು.
ನಂತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮಾತನಾಡಿ, ದೇಶ ಸೇವೆಯಲ್ಲಿ ನಮ್ಮ ಅರೆಸೇನಾ ಪಡೆಗಳು ಸೇನಾಪಡೆಗಳಂತೆ ಶ್ರಮಿಸುತ್ತೇವೆ ಆದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ತಾರತಮ್ಯವೇಕೆ. ನಮ್ಮನ್ನು ಸೇನಾ ಪಡೆಗಳಂತೆ ಪರಿಗಣಿಸಿ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿ ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಗೌರವಾಧ್ಯಕ್ಷರಾದ ಮಾಜಿ ಐಜಿ ಅರ್ಕೇಶ್ ಮಾತನಾಡಿ, ಸರ್ಕಾರಗಳು ಅರೆಸೇನಾ ಪಡೆಗಳ ಕಾರ್ಯ ವೈಖರಿ ಹಾಗೂ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಶ್ರಮವನ್ನು ಗುರುತಿಸಿ ಸೇನಾಪಡೆಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ನಮಗೂ ಕಲ್ಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ರಾಜ್ಯ ಸಮಿತಿಯ ಪದಾಧಿಕಾರಿಗಳು, ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು