ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ 100 ಅಡಿ ಆಳದ ಕಣಿವೆಗೆ ಬಿದ್ದ ಯುವತಿ, ಸ್ಥಳೀಯ ಚಾರಣಿಗರಿಂದ ರಕ್ಷಣೆ

ಮಹಾರಷ್ಟ್ರದ ಸತಾರಾದಲ್ಲಿ ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳುವಾಗ 100 ಅಡಿ ಕಣಿವೆಗೆ ಬಿದ್ದಿದ್ದಾಳೆ.  ಸ್ಥಳೀಯ ಚಾರಣಿಗರು ಹಗ್ಗದ ಸಹಾಯದಿಂದ ಆಕೆಯನ್ನು ರಕ್ಷಿಸಿದ್ದಾರೆ.

ಖತಾವ್ ತಾಲೂಕಿನ ಮೈನಿ ಗ್ರಾಮದ 29 ವರ್ಷದ ರೂಪಾಲಿ ದೇಶಮುಖ್ ಸ್ನೇಹಿತರ ಜೊತೆ ಸಜ್ಜನಗಡ ಮತ್ತು ಥೋಸ್ಘರ್ ಜಲಪಾತಗಳಿಗೆ ಭೇಟಿ ನೀಡುತ್ತಿದ್ದರು.  ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ಕಂದರಕ್ಕೆ ಬಿದ್ದಳು.

ಆಕೆಯು ಪ್ರಪಾತಕ್ಕೆ ಬಿದ್ದ ನಂತರ, ಆಕೆಯ ಸ್ನೇಹಿತರು ಇತರೆ ಸ್ಥಳೀಯ ಚಾರಣಿಗರನ್ನು ಸಹಾಯಕ್ಕಾಗಿ ಕರೆದರು, ಹೋಮ್ ಗಾರ್ಡ್ ಅವಿನಾಶ್ ಮಂದೆ ಹಗ್ಗದೊಂದಿಗೆ ಕೆಳಗಿಳಿದು, ರೂಪಾಲಿಯನ್ನು ರಕ್ಷಿಸಿ ತಂದರು. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಸ್ಪತ್ರೆಗೆ ಸಾಗಿಸಿದರು.

Leave a Reply

Your email address will not be published. Required fields are marked *