ದೊಡ್ಡಬಳ್ಳಾಪುರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ, ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಇದರಿಂದ ತಾಲೂಕಿನ ಸೂಲುಕುಂಟೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಸಾಸಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಸೂಲುಕುಂಟೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಹಾವಳಿ ನೀಡುತ್ತಾ.. ಮನೆ ಬಳಿಯೇ ಬಂದು ಸಾಕು ಪ್ರಾಣಿಗಳ ಹೊತ್ತೊಯ್ಯುವ ಮೂಲಕ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ.
ಸುಮಾರು ಎರಡು ವರ್ಷದಿರಬಹುದು ಎನ್ನಲಾಗುತ್ತಿರುವ ಹೆಣ್ಣು ಚಿರತೆ ಇದಾಗಿದ್ದು, ಸಾಕು ಪ್ರಾಣಿಗಳ ರಕ್ಷಣೆಗೆ ಗ್ರಾಮಸ್ಥರೆ ಕಳೆದೆರಡು ದಿನಗಳ ಹಿಂದೆ ತಂದಿಡಲಾಗಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನೆಮ್ಮದಿ ಪಡುವಂತಾಗಿದೆ.
ಇದೇ ಗ್ರಾಮದ ವ್ಯಾಪ್ತಿಯಲ್ಲಿ ಫೆಬ್ರವರಿ 16 ರಂದು ಕೂಡ ಚಿರತೆ ಸೆರೆಯಾಗಿತ್ತು.