ಸೃಜನಶೀಲ ಚಿಂತನೆ ಹಾಗೂ ಚಟುವಟಿಕೆಗಳು ಸಂತೋಷದಾಯಕ‌ ಕಲಿಕೆಗೆ ಸಹಕಾರಿ- ಕವಿ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ

ಸೃಜನಶೀಲ ಚಿಂತನೆಗಳು ಮತ್ತು ಚಟುವಟಿಕೆಗಳು ಸಂತೋಷದಾಯಕ ಕಲಿಕೆಗೆ ಸಹಕಾರಿ ಅಗುತ್ತವೆ. ಸಂತೋಷದಿಂದ ಸಾಮರ್ಥ್ಯವು ಹೆಚ್ಚಿಸುತ್ತದೆ. ಸಾಮರ್ಥ್ಯ ಯಶಸ್ಸಿನ ಕಡೆಗೆ ಕರೆದೊಯ್ಯುತ್ತದೆ ಎಂದು ಕವಿ ಮತ್ತು ಕಲಾವಿದ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ತಿಳಿಸಿದರು.

ತಾಲ್ಲೂಕಿನ ಕೊನಘಟ್ಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ರಂಗಭೂಮಿ ಮತ್ತು ವ್ಯಕ್ತಿ ವಿಕಸನ ಎಂಬ ವಿಷಯ ಕುರಿತು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಿಪಡಿಸಿಕೊಂಡರೆ ಪ್ರತಿಭಾವಂತ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದರು.

ವಿದ್ಯಾರ್ಥಿಗಳು ಪಠ್ಯದೊಂದಿಗೆ ರಂಗಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ರಂಗಚಟುವಟಿಗಳು ನಡೆದರೆ ರಂಗಭೂಮಿ ಉಳಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಯುವ ಸಮುದಾಯದಲ್ಲಿ ರಂಗಕಲೆಯನ್ನು ಪ್ರೋತ್ಸಾಹಿಸಲು ರಂಗಾಯಣ, ನಿನಾಸಂ ಮುಂತಾದಗಳು ನಿರಂತರವಾಗಿ ಕಾರ್ಯನಿವರ್ಹಿಸುತ್ತಿವೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ದಯಾನಂದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಹವ್ಯಾಸಗಳು ಮತ್ತು ಪಠ್ಯೇತರ ಚಟುವಟಿಕೆಗಳು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಪ್ರತಿಭೆಗೆ ಮಾತ್ರ ಮನ್ನಣೆ ಇರುತ್ತದೆ. ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿ ಮತ್ತು ಕಲಾಭಿವ್ಯಕ್ತಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಉಪನ್ಯಾಸಕರುಗಳಾದ ನಾಗಪ್ಪಗೌಡ, ಅಮೃತವರ್ಷಿಣಿ, ಹೇಮಾವತಿ, ವಿನುತ, ಕಲ್ಪನಾ, ಕೇಶವಮೂರ್ತಿ, ನಂದಕುಮಾರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *