ಸೂಲೂರು ಗ್ರಾಮ ದೇವತೆಗಳ ಉದ್ಘಾಟನೆಯಲ್ಲಿ ಶಾಸಕ, ಎಂಎಲ್ ಸಿ ಭಾಗಿ

ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ಸೂಲೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳಾದ ಕರಗದಮ್ಮ, ಗಂಗಮ್ಮ, ಹಾಗೂ ಚೌಡೇಶ್ವರಿ ದೇವಸ್ಥಾನದ ಉದ್ಘಾಟನೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ದೇವರ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಅವಕಾಶ ನಮಗೆ ಸಿಕ್ಕಿದೆ ಸರಕಾರದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಕ್ಷೇತ್ರವನ್ನು ಮಾದರಿಯಾಗುವ ರೀತಿಯಲ್ಲಿ ಎಲ್ಲರ ಸಹಕಾರ ಮತ್ತು ಬೆಂಬಲದಿಂದ ಮಾಡುತ್ತೇವೆ. ಜಿಲ್ಲೆಗೆ ಜನಪರವಾದ ಯೋಜನೆಗಳನ್ನು ತರುವ ಪ್ರಯತ್ನವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಜನರ ನಂಬಿಕೆಯನ್ನು ಈ ದೇವರ ಸನ್ನಿಧಿಯಲ್ಲಿ ಕಾಣಬಹುದಾಗಿದೆ ದೇವರು ಎಲ್ಲರನ್ನೂ ಕಾಯುವ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಜೀರ್ಣೋದ್ಧಾರದಲ್ಲಿ ಎಲ್ಲಾ ಸಮುದಾಯದವರೂ ಸಂತೋಷ ಪೂರ್ವಕವಾಗಿ ಭಾಗಿಯಾಗಿ ತಮ್ಮ ಕೈಲಾದ ಸಹಾಯದ ಜೊತೆಗೆ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಈ ಮಾದರಿಯ ಸೇವೆಯನ್ನು ನಾವು ಎಲ್ಲರೂ ಮುಂದುವರಿಸಿಕೊಂಡು ಹೋಗುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ದೊರಕುವಂತೆ ಆಗಲಿ ಎಂದು ಇದೇ ಸಂದರ್ಭದಲ್ಲಿ ಆಶಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಸೂಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಜನಪನಹಳ್ಳಿ ನವೀನ್, ಬಾಲಾಜಿ, ವೀರೇಂದ್ರ ಪಾಟೀಲ್, ಸೂಲೂರು ಶ್ರೀನಿವಾಸ್, ಪೋಲೀಸ್ ಭೈರಪ್ಪ, ಮುನಿಯಪ್ಪ, ಮುನಿರೆಡ್ಡಿ, ಮುನಿಆಂಜಿನಪ್ಪ, ಗಾರೆ ಶ್ರೀನಿವಾಸ, ಪಿಡಿಒ ಪ್ರದೀಪ್ ಸೇರಿದಂತೆ ಸೂಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *