ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ರವರ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ ರೋಹಿತ್ ಬಳಗವು ಗುಜರಾತ್ ತಂಡದ ವಿರುದ್ಧ 27 ರನ್ ಗಳ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡವು ಉತ್ತಮ ಆರಂಭ ದೊರೆಯಿತು. ಆದರೆ 7ನೇ ಓವರ್ ಬೌಲಿಂಗ್ ಮಾಡಿದ ರಶೀದ್ ಖಾನ್ ಕ್ರಮವಾಗಿ ರೋಹಿತ್ (29), ಇಶನ್ ಕಿಶನ್ (31) ವಿಕೆಟ್ ಪಡೆದು ಮಿಂಚಿದರು. ನಂತರ ಕ್ರಿಸ್ ಗೆ ಬಂದ ವದೆರ (15), ವಿಷ್ಣು ವಿನೋದ (30), ಟೀಮ್ ಡೇವಿಡ್ (5) ಹೆಚ್ಚು ಹೊತ್ತು ಕ್ರಿಸ್ ನಲ್ಲಿ ಉಳಿಯಲಿಲ್ಲ ಆದರೆ ಸೂರ್ಯನ ಅಜೇಯ ಶತಕದ(11×4, 6×6) ನೆರವಿನಿಂದ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದರು.
219 ರನ್ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ ಕ್ರಮವಾಗಿ ಸಹಾ (2), ಶುಬ್ಮನ್ ಗಿಲ್ (6), ಹಾರ್ದಿಕ್ (4) ಹೆಚ್ಚು ಹೊತ್ತು ಕ್ರಿಸ್ ನಲ್ಲಿ ಉಳಿಯಲಿಲ್ಲ. ವಿಜಯ್ ಶಂಕರ್ (29),ಮಿಲ್ಲರ್ (41) ರನ್ ಗಳಿಸಿ ಪೆವಿಲಿಯನ್ ಸೇರಿದರು 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದ ರಶೀದ್ ಖಾನ್ ಅಜೇಯ (79) ಗಳಿಸಿ ಗೆಲುವಿನ ಸನಿಹ ಬಂದರು .ಒಟ್ಟಾರೆ ಗುಜರಾತ್ ತಂಡದ 8 ವಿಕೆಟ್ ನಷ್ಟಕ್ಕೆ 191 ರನ್ ಮಾತ್ರ ಗಳಿಸಲು ಸಧ್ಯವಾಯಿತು.
ಅಜೇಯ ಶತಕ ಗಳಿಸಿದ ಸೂರ್ಯ ಕುಮಾರ್ ಯಾದವ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.