ಸೂಕ್ತ ಸಮಯಕ್ಕೆ ಬಸ್ ಬಿಡಿ ಸ್ವಾಮಿ…: ಟಿಸಿಗೆ ಬಿಸಿ‌ ಮುಟ್ಟಿಸಿದ ಬಸ್ ಪ್ರಯಾಣಿಕರು

ದಿನನಿತ್ಯ ಬಸ್ ಪ್ರಯಾಣಿಕರು ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಆಫೀಸ್, ಶಾಲಾ-ಕಾಲೇಜುಗಳು, ಆಸ್ಪತ್ರೆ, ಕೋರ್ಟ್-ಕಚೇರಿ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಆಗದೇ ಪರದಾಡುವಂತಾಗಿದೆ. ಏಕೆಂದರೆ, ಗಂಟೆ ಗಂಟೆ ಕಾದರು ಸೂಕ್ತ ಸಮಯಕ್ಕೆ ಬಸ್ ಗಳು ಬರೋದಿಲ್ಲ ಎಂಬ ಕಾರಣಕ್ಕೆ. ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಒಂದು ಬಸ್ ಬಂದರೆ ಅದಕ್ಕೆ ನೂಕುನುಗ್ಗಲು. ಹೆಜ್ಜೆ ಇಡಲು ಜಾಗ ಇರೋದಿಲ್ಲ. ಪ್ರತಿದಿನ ಇದೇ ಗೋಳು. ಇದರಿಂದ ಬೇಸತ್ತ ಪ್ರಯಾಣಿಕರು ಇಂದು ಬೆಳಗ್ಗೆ ಬಸ್ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಹಲವು ಬಾರಿ ದೂರು ನೀಡಿದರೂ ಹೆಚ್ಚುವರಿ ಬಸ್ ಗಳನ್ನ ಬಿಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಸಿಕ ಮತ್ತು ವಾರ್ಷಿಕ ಬಸ್ ಪಾಸ್ ಗಳನ್ನ ನೀಡಿ ಸಮಯಕ್ಕೆ ಸರಿಯಾಗಿ ಬಸ್ ಗಳನ್ನ ಬಿಡದ ಕೆಎಸ್ಆರ್ ಟಿಸಿ ಘಟಕದ  ಅಧಿಕಾರಿಗಳು ಬೇಜವಾಬ್ದಾರಿ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *