ಸುಮಾರು ನೂರಾರು ವರ್ಷಗಳ ಇತಿಹಾಸವುಳ್ಳ ಸರ್. ಎಂ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಸ್ಥಾನದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಇದೆ. ಘಾಟಿ ಸುಬ್ರಹ್ಮಣ್ಯ ಸುಂದರ ಪ್ರಕೃತಿ ಸೌಂದರ್ಯದ ನಡುವೆ ವ್ಯರ್ಥವಾಗಿ ಹರಿದು ಹೊಗುತ್ತಿದ್ದ ನೀರನ್ನು ತಡೆಹಿಡಿಯಲು 1917ರಲ್ಲಿ ಜಗತ್ತು ಕಂಡ ಶ್ರೇಷ್ಠ ಇಂಜಿನಿಯರ್ ಸರ್. ಎಂ ವಿಶ್ವೇಶ್ವರಯ್ಯನವರು ಈ ಪಿಕಪ್ ಡ್ಯಾಂ ಅನ್ನು ನಿರ್ಮಿಸಿದರು.
ಪಿಕಪ್ ಡ್ಯಾಂ ನಿರ್ಮಾಣದ ಮೂಲ ಉದ್ದೇಶ
ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾರೀ ದನಗಳ ಜಾತ್ರೆ ಬಹಳ ಹಿಂದಿನ ಕಾಲದಿಂದಲೂ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ. ಸುಮಾರು 100-120 ವರ್ಷಗಳ ಹಿಂದೆ ಜನ ಜಾನುವಾರು ಕುಡಿಯುವ ನೀರಿಗೆ ಅಭಾವ ಹೆಚ್ಚಾಗಿತ್ತು. ಈ ಹಿನ್ನೆಲೆ ಕುಡಿಯುವ ನೀರನ್ನು ಒದಗಿಸಲು ಸಲುವಾಗಿ ಸುಂದರ ಪ್ರಕೃತಿ ಸೌಂದರ್ಯದ ನಡುವೆ ವ್ಯರ್ಥವಾಗಿ ಹರಿದು ಹೊಗುತ್ತಿದ್ದ ನೀರನ್ನು ತಡೆಹಿಡಿದು ಪಿಕಪ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ಇಲ್ಲಿನ ಸ್ಥಳೀಯ ಹಿರಿಯರು ತಿಳಿಸಿದ್ದಾರೆ.
ಆಯಾಕಟ್ಟಿನ ಜಲಾನಯನ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣವಾಗಿದೆ. ಸೂಕ್ತವಾಗಿ ಈ ಅಣೆಕಟ್ಟನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಿದರೆ ಸುಮಾರು ಎರಡು ಪಂಚಾಯಿತಿಗಳಿಗೆ ಒಳಪಡುವ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಬಹುದು. ಆದರೆ, ಇದ್ಯಾವುದು ಮಾಡದೇ ನೀರನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸುಮಾರು ಎರಡು ಪಂಚಾಯಿತಿಗಳಿಗೆ ಒಳಪಡುವ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವಿರುವ ಪಿಕಪ್ ಡ್ಯಾಂ ಸೂಕ್ತ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಹಿನ್ನೀರು ಶೇಖರಣೆಯಾಗುವ ಭೂ ಪ್ರದೇಶವೂ ಕೂಡ ಭೂಗಳ್ಳರ ಒತ್ತುವರಿಯಿಂದ ಕಿರಿದಾಗುತ್ತಿದೆ. ಇದು ಒಂದು ಕಾಲದಲ್ಲಿ ಸುಂದರ ದೃಶ್ಯವಾಗಿತ್ತು. ಆದರೆ, ಇಂದು ಅಣೆಕಟ್ಟಿನ ಸುತ್ತಲಿನ ಪ್ರದೇಶವು ಆಹಾರ ಪೊಟ್ಟಣಗಳು, ಖಾಲಿ ಮದ್ಯದ ಬಾಟೆಲ್, ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಮತ್ತು ಸಿಗರೇಟ್ ತುಂಡುಗಳಿಂದ ತುಂಬಿದ್ದು, ಕೊಳಕು, ದುರ್ವಾಸನೆಯ ತಾಣವಾಗಿದೆ. ಡ್ಯಾಂ ಸುತ್ತಲೂ ದೊಡ್ಡ ದೊಡ್ಡ ಪೊದೆಗಳು, ಬಳ್ಳಿಗಳು ಆವರಿಸಿದ್ದು, ಸುಮಾರು 8 ಮೀ. ಎತ್ತರ ಮತ್ತು 55 ಮೀ. ಉದ್ದವಿರುವ ಡ್ಯಾಂ ನ ಆಕೃತಿ ಸರಿಯಾಗಿ ಕಾಣುವುದಿಲ್ಲ. ಸಮಯಕ್ಕೆ ಸರಿಯಾಗಿ ಹೂಳು ತೆಗೆಯದೇ ನಿರ್ಲಕ್ಷ್ಯಕ್ಕೊಳಗಾಗಿದೆ.
ಹರಿದು ಬರುವ ಪ್ರವಾಸಿಗರ ದಂಡು: ಸ್ವಲ್ಪ ಯಾಮಾರಿದರೆ ಆಪತ್ತು ಗ್ಯಾರೆಂಟಿ
ಡ್ಯಾಂ ಹಾಗೂ ಇಲ್ಲಿನ ರಮಣೀಯ ಸೌಂದರ್ಯ ಸವಿಯಲು ಪ್ರವಾಸಿಗರ ದಂಡು ಹರಿದುಬರುತ್ತದೆ. ಆದರೆ, ಪ್ರವಾಸಿಗರ ಹಿತದೃಷ್ಟಿಯಿಂದ ಡ್ಯಾಂ ನ ಸುತ್ತಾ ಯಾವುದೇ ಜಾಗೃತ ಕ್ರಮಗಳನ್ನು ಅಳವಡಿಸಿಲ್ಲ. ಅಣೆಕಟ್ಟಿನ ಮೇಲಿಂದ ಯಾವುದೇ ಜೀವ ಭಯವಿಲ್ಲದೇ ನೀರು ಧುಮುಕುವುದನ್ನು ನೋಡಲು ಆಗುವುದಿಲ್ಲ. ಸ್ವಲ್ಪ ಯಾಮಾರಿದರೆ ಪ್ರಾಣಕ್ಕೆ ಕುತ್ತುಂಟುಗಾವುದು ಗ್ಯಾರೆಂಟಿ. ಏಕೆಂದರೆ ಅಣೆಕಟ್ಟಿನ ಮೇಲೆ ಪಾಚಿಕಟ್ಟಿಕೊಂಡಿದೆ. ಯಾವುದೇ ತಡೆಗೋಡೆ ಇಲ್ಲ. ಎರಡೂ ತುದಿಗಳಲ್ಲಿ ಮಾರ್ಗವು ತೆರೆದಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಅಣೆಕಟ್ಟಿನ ಉದ್ದಕ್ಕೂ ಪ್ರಯಾಣಿಸಬೇಕಾಗಿದೆ. ಅಣೆಕಟ್ಟಿನ ಕೆಳಭಾಗ ಅಥವಾ ಮೇಲ್ಭಾಗವನ್ನು ತಲುಪಲು ತೀರಾ ಕಠಿಣವಾಗಿದೆ.
ಇಲ್ಲಿನ ಪ್ರಕೃತಿ ಸವಿದು ನೀರಿನಲ್ಲಿ ಆಟವಾಡಲು ನೂರಾರು ಪ್ರವಾಸಿಗರು ಬರುತ್ತಾರೆ. ಪ್ರೇಮಿಗಳು ಪ್ರಕೃತಿ ಮಡಿಲಿನಲ್ಲಿ ಕುಳಿತು ಕೆಲಕಾಲ ಏಕಾಂತ ಅನುಭವಿಸಲು ಬರುತ್ತಾರೆ. ಆದರೆ, ಯಾರಾದರೂ ಒಂಟಿಯಾಗಿದ್ದರೆ ಸಾಕು ಅಲ್ಲಿ ಕಳ್ಳರ ಆಟ ಶುರುವುಗತ್ತದೆ. ಪ್ರವಾಸಿಗರು, ಪ್ರೇಮಿಗಳನ್ನು ಭಯಪಡಿಸಿ ಅವರಿಂದ ಬೆಲೆಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗುತ್ತಾರೆ. ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿ ಯಾವ ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಿಲ್ಲ.
ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ….!
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರು ಗೆದ್ದಿರುವ ಕ್ಷೇತ್ರದಲ್ಲಿ ಈ ಪಿಕಪ್ ಡ್ಯಾಂ ಇದೆ. ಆದರೆ, ಪಿಕಪ್ ಡ್ಯಾಂ ನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ, ಅಭಿವೃದ್ಧಿ ಪಡಿಸುವ ಯೋಚನೆ ಮಾಡದೇ ಇರುವುದು ವಿಪರ್ಯಾಸವೇ ಸರಿ… ಕೇವಲ ಚುನಾವಣೆ ಸಂದರ್ಭದಲ್ಲಿ ಹಾಗೆ ಮಾಡುವೆ ಹೀಗೆ ಮಾಡುವೆ ಎಂದು ಜನರಿಗೆ ಆಶ್ವಾಸನೆ ಕೊಟ್ಟು, ಈಗ ಏನೂ ಮಾಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ಈ ಭಾಗಕ್ಕೆ ಬರುವುದೇ ಅಪರೂಪ, ಇನ್ನು ಇನ್ನೆಲ್ಲಿ ಈ ಸಮಸ್ಯೆಗಳು ಗಮನಕ್ಕೆ ಬರುತ್ತದೆ. ಇತ್ತ ಅಧಿಕಾರಿಗಳು ಈ ಡ್ಯಾಂಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಾಂಗ್ಲಾ......... ಒಂದು ಎಚ್ಚರಿಕೆಯ ಪಾಠ......... ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ...... ಬಾಂಗ್ಲಾದೇಶದಲ್ಲಿ…
ಜೆಸಿಬಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ…
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…
ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…