ಕೋಲಾರ: ತಾಲೂಕಿನ ಸುಗಟೂರಿನ ಸಬರಮತಿ ಸಂಯುಕ್ತ ಪ್ರೌಢಶಾಲೆಯಲ್ಲಿ ಭಾನುವಾರ 1995-96 ನೇ ಸಾಲಿನ ವಿಧ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು ಇದಕ್ಕೂ ಮುನ್ನ ಶಿಕ್ಷಕರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಹಳೆ ವಿಧ್ಯಾರ್ಥಿಗಳು ವೇದಿಕೆಗೆ ಕರೆತರಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಕೆ.ವಿ.ರಾಜಣ್ಣ ಮಾತನಾಡಿ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ತೆರಳಿದ್ದಾರೆ. ಆದರೆ ಎಲ್ಲಾ ವಿದ್ಯಾರ್ಥಿಗಳು ಸುಸಂಸ್ಕೃತ ವಿದ್ಯಾರ್ಥಿಗಳಾಗಿರುವುದು ಶಿಕ್ಷಕರಾದ ನಮಗೆ ಹೆಮ್ಮೆ ವಿಷಯವಾಗಿದೆ ಎಲ್ಲಿಯಾದರೂ ಸಿಕ್ಕಾಗ ನಮ್ಮ ಶಿಷ್ಯರ ಪಡೆ ಅಂತ ಹೆಮ್ಮೆಯಿಂದ ಹೇಳಬಹುದಾಗಿದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ ಇದೇ ಅವರು ಓದಿದ ಶಾಲೆಗೆ ನೀಡುವ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಬಿ.ವಿ ವೆಂಕಟೇಶಪ್ಪ ಮಾತನಾಡಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ವಿಧ್ಯಾರ್ಥಿಗಳಲ್ಲಿ ಇದೆ ಅವರಿಗೆಲ್ಲ ಬದುಕಿನ ಪ್ರಮುಖ ಘಟಗಳಲ್ಲಂತೂ ಮಾರ್ಗದರ್ಶಕರಾಗಿ ಗುರುವಿನ ಸಹಾಯ ಮುಖ್ಯವಾಗಿದೆ ಜೀವನದಲ್ಲಿ ಎಷ್ಟೇ ಮುಂದುವರಿದರೂ ಅದರ ಹಿಂದೆ ಗುರುವಿನ ಪಾತ್ರ ಇದ್ದೇ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಕಡಗಟ್ಟೂರು ವಿಜಯಕುಮಾರ್ ಮಾತನಾಡಿ ಬಾಲ್ಯದಲ್ಲಿ ತುಂಟತನ, ಅಜ್ಞಾನ, ಅಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸುವ ಎಲ್ಲ ಗುರುಗಳಿಗೂ ನಮನಗಳನ್ನು ಸಲ್ಲಿಸಿದರು ಗುರುಗಳಿಂದ ಬೆತ್ತದ ಏಟು ಬಿದ್ದಿದ್ದರಿಂದ ಇವತ್ತು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪಗೊಂಡಿದ್ದೇವೆ ಪಾಠ ಕಲಿಸಿ ಜೀವನದ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಬರಮತಿ ಶಾಲೆಯ ಶಿಕ್ಷಕರಾದ ಬಾಲಕೃಷ್ಣ, ಚೌಡರೆಡ್ಡಿ, ಜಗದೀಶ್, ಗೋ.ನಾ ಸ್ವಾಮಿ, ನಾರಾಯಣಸ್ವಾಮಿ, ಮೋಹನ್ ಹಳೆ ವಿಧ್ಯಾರ್ಥಿಗಳಾದ ಚಂದ್ರಶೇಖರ್, ರವಿಚಂದ್ರರೆಡ್ಡಿ, ಜಗದೀಶ್, ನಂದೀಶ್, ನಾರಾಯಣಸ್ವಾಮಿ, ಕೃಷ್ಣಕುಮಾರಿ, ಶ್ರೀದೇವಿ, ಮಂಜುಳ ಮುಂತಾದವರು ಇದ್ದರು.
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…
ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…
ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…
ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…
ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…