ಸೀತಿ ಬಿಜಿಎಸ್ ಶಾಲೆಗೆ ಸೀತಿಹೊಸೂರು ಮುರಳಿಗೌಡ ನೇತೃತ್ವದಲ್ಲಿ ಹಸಿರು ಹೊದಿಕೆ ಹಾಗೂ ಗಿಡ ವಿತರಣೆ

ಕೋಲಾರ:ತಾಲ್ಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಮದಲ್ಲಿನ ಬಿಜಿಎಸ್ ಶಾಲೆಯಲ್ಲಿ ಬುಧವಾರ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ ನೇತೃತ್ವದಲ್ಲಿ ಶಾಲೆಗೆ ಹಸಿರು ಹೊದಿಗೆ ಹಾಗೂ ನೂರು ಗಿಡಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮುರಳಿಗೌಡ ಮಾತನಾಡಿ, ವರ್ಷದ ಒಂದು ದಿನದ ಬದಲಿಗೆ ಪ್ರತಿನಿತ್ಯವೂ ಪರಿಸರ ಸಂರಕ್ಷಣೆಗಾಗಿ ಕೈಜೋಡಿಸಬೇಕು ನಮ್ಮ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳುತ್ತೇನೆ ಎಂದು ಪ್ರತಿಯೊಬ್ಬರೂ ಪ್ರಮಾಣ ಮಾಡಬೇಕು ಶಾಲೆಯ ಆವರಣದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಒಂದು ಸುಂದರ ಪ್ರದೇಶ ಇದಾಗಬೇಕಾಗಿದೆ. ಸಂಬಂಧಪಟ್ಟ ಪೋಷಕರು ಹಾಗೂ ವಿಧ್ಯಾರ್ಥಿಗಳು ಇತ್ತ ಗಮನ ಹರಿಸಬೇಕಾಗಿದೆ. ಪರಿಸರ ರಕ್ಷಣೆಯಿಂದ ಮಾತ್ರ ಮನುಕುಲ ಉಳಿಯಲು ಸಾಧ್ಯವಿದೆ. ಪ್ರತಿಯೊಬ್ಬರು ಗಿಡಮರಗಳನ್ನು ರಕ್ಷಿಸುವ ಮತ್ತು ಪೋಷಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ್, ಶಿಕ್ಷಕರು ವಿಧ್ಯಾರ್ಥಿಗಳು ಇದ್ದರು

Leave a Reply

Your email address will not be published. Required fields are marked *