ಸೀತಾರಾಮ್ ಯೆಚೂರಿ ನಿಧನ ದೇಶಕ್ಕೆ ತುಂಬಲಾರದ ನಷ್ಟ-ಹ.ಮಾ ರಾಮಚಂದ್ರಪ್ಪ

ಕೋಲಾರ: ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರ ಅಗಲಿಕೆ ದೇಶದ ದುಡಿಯುವ ಜನತೆಗೆ ಹಾಗೂ ಎಡ ಚಳುವಳಿಗೆ ಬಹುದೊಡ್ಡ ನಷ್ಟ ಉಂಟು ಮಾಡಿದೆ ಎಂದು ಹಿರಿಯ ಮುಖಂಡ ಹ.ಮಾ ರಾಮಚಂದ್ರಪ್ಪ ತಿಳಿಸಿದರು.

ನಗರದ ಮೆಕ್ಕೆ ವೃತ್ತದಲ್ಲಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ಸೀತಾರಾಮ್ ಯೆಚೂರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಎರಡು ನಿಮಿಷಗಳ ಕಾಲ ಮೌನ ಗೌರವ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೆ ಹೋರಾಟದ ಮೂಲಕ ಸಮಾಜದ ಶೋಷಣೆ ದಬ್ಬಾಳಿಕೆ ವಿರುದ್ದ ಸಂಸತ್ತಿನ ಒಳಗೂ ಹೊರಗೂ ಹೋರಾಟ ಮಾಡಿದ್ದಾರೆ ದೇಶದಲ್ಲಿ ಒಳಿತಿಗಾಗಿ ಮಾರ್ಗದರ್ಶನ ಮಾಡುವ ನಾಯಕರಾಗಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ, ಸಮಾಜದ ಪರಿವರ್ತನೆಗಾಗಿ ಮುಡಿಪಾಗಿಟ್ಟಿದ್ದರು ಎಂದರು.

ಪಾರ್ಲಿಮೆಂಟ್ ನಲ್ಲಿ ರಾಜ್ಯಸಭಾ ಸದಸ್ಯರಾಗಿ ದೇಶದ ಸಮಗ್ರ ಅಭಿವೃದ್ಧಿ ಹಾಗು ಸಮಗ್ರತೆ, ಐಕ್ಯತೆಯ ಮೇಲೆ ನ್ಯಾಯಯುತವಾದ ವಿಷಯಗಳನ್ನು ಮಂಡಿಸಿದ್ದಾರೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿ ನೇರವಾಗಿ ಇಂದಿರಾ ಗಾಂಧಿಯವರನ್ನೇ ಎದುರಿಸಿದ ದಿಟ್ಟತನ ಅವರದು ಅವರ ಭಾಷಣವನ್ನು ಕೇಳಲು ಸಾಲುಗಟ್ಟಿ ನಿಂತಿದ್ದ ಉದಾಹರಣೆಗಳು ಇದ್ದವು ಎಂದರು

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಅವರ ಪ್ರಬುದ್ಧತೆಯೂ ಕೇವಲ ದೇಶದೊಳಗೆ ಮಾತ್ರವಲ್ಲ ವಿಶ್ವದೊಳಗೂ ಮಾದರಿಯಾಗಿದೆ. ಮಾರ್ಕ್ಸ್‌ವಾದದ ಹಲವು ಆಯಾಮಗಳಲ್ಲಿ ಆಳವಾದ ಪರಿಣತಿ ಅವರನ್ನು ವಿಶ್ವದ ಮುಖ್ಯ ಮಾರ್ಕ್ಸ್‌ವಾದಿ ಚಿಂತಕರನ್ನಾಗಿಸಿತ್ತು ಭಾರತದ ಯುವಜನತೆಗೆ ಕಾಮ್ರೇಡ್ ಸೀತಾರಾಮ ಯೆಚೂರಿಯವರ ಬದ್ಧತೆಯ ಜೀವನ ಎಂದಿಗೂ ಮಾದರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ಟಿ.ಎಂ ವೆಂಕಟೇಶ್, ಹೆಚ್.ಬಿ ಕೃಷ್ಣಪ್ಪ, ವಿ.ನಾರಾಯಣರೆಡ್ಡಿ, ಗೀತಾ, ವಿಜಯಕೃಷ್ಣ, ಆಲಹಳ್ಳಿ ವೆಂಕಟೇಶಪ್ಪ, ಡಿ ಮುನೇಶ್, ಭೀಮರಾಜ್, ಮಂಜುಳಾ, ಮುಸ್ತಫಾ, ಸತೀಶ್, ಅಪ್ಪಯ್ಯಣ್ಣ, ಯಲ್ಲಪ್ಪ ಮುಂತಾದವರು ಇದ್ದರು.

Leave a Reply

Your email address will not be published. Required fields are marked *