ಸಿಬಿಎಸ್‌ಸಿ ಫಲಿತಾಂಶ‌: ಮಾರುತಿ ವಿದ್ಯಾ ಮಂದಿರ್ ಶಾಲೆಗೆ ಶೇಕಡ 100 ಫಲಿತಾಂಶ

2017-18 ಶೈಕ್ಷಣಿಕ ವರ್ಷದಿಂದ ಮಾರುತಿ ವಿದ್ಯಾ ಮಂದಿರ್ (ಎಂ.ವಿ. ಎಂ) ಶಾಲೆ ತನ್ನ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರೆಸುತ್ತಾ 2024–25ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಗಳಿಸಿದೆ.

ಕೇಂದ್ರಿತ ಅಧ್ಯಯನ:

ಪ್ರಸಕ್ತ ಶೈಕ್ಷಣಿಕ ವರ್ಷದ ಫಲಿತಾಂಶದ ವಿಶೇಷತೆ ಏನೆಂದರೆ, ಈ ವಿದ್ಯಾರ್ಥಿಗಳು ಯಾರೂ ಖಾಸಗಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ ಗಳಿಗೆ ಹೋಗದೇ ಸಂಪೂರ್ಣವಾಗಿ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಸಾಧ್ಯವಾಗಿದೆ.

ಬಲವಾದ ಸಂದೇಶ:

ಎಂವಿಎಂ ಶಾಲೆಯಲ್ಲಿ ಉತ್ತಮ ನುರಿತ ಬೋಧನಾ ವಿಧಾನ, ನಾಯಕತ್ವದ ಬಲವನ್ನು ಎತ್ತಿ ತೋರಿಸುವುದಲ್ಲದೆ, ಗುಣಮಟ್ಟದ ಶಿಕ್ಷಣ ನಗರ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬ ಬಲವಾದ ಸಂದೇಶ ನೀಡುತ್ತದೆ ಎಂದು ಶಾಲೆಯ ಪ್ರಾಂಶುಪಾಲ ಕೆ.ಎಸ್.ಗೌರವ್ ಹೇಳಿದರು.

ಈ ಬಾರಿಯೂ ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುವುದು ಸಂತಸದ ವಿಷಯ. ಮುಖ್ಯವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಪಾಠ ಬೋಧನೆಗಳನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ತರಬೇತಿ ಪಡೆದಿಲ್ಲ ನಮ್ಮ ಶಾಲೆಯಲ್ಲಿಯೇ ನಡೆಸಿದ ಕಲಿಕೆಗೆ ಪೂರಕವಾದ ವಿಶೇಷ ಚಟುವಟಿಕೆ, ವಿಶೇಷ ತರಗತಿಯಿಂದ ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆಂದರು.

ಕ್ಯಾಮೆರಾ ಕಣ್ಗಾವಲಿನಲ್ಲೂ ಮಕ್ಕಳಿಂದ ಉತ್ತಮ ಸಾಧನೆ: ಶ್ರೀನಿವಾಸ್ ಮೆಚ್ಚುಗೆ

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ. ಶ್ರೀನಿವಾಸ್ ಮಾತನಾಡಿ, ಕಳೆದ 08 ವರ್ಷಗಳಿಂದ ಶೇ.100 ಫಲಿತಾಂಶವನ್ನು ಶಾಲೆಯು ಪಡೆಯುತ್ತಿದೆ. ಈ ಬಾರಿ ಕ್ಯಾಮೆರಾ ಕಣ್ಣಾವಲಿನಲ್ಲಿ ನಡೆದ ಕಟ್ಟುನಿಟ್ಟಿನ ಪರೀಕ್ಷೆಯಲ್ಲೂ ನೂರರಷ್ಟು ಫಲಿತಾಂಶ ಪಡೆದಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕ ತಂಡದ ಸದಸ್ಯರಿಗೆ ಅಭಿನಂದನೆ ಎಂದರು. ಈ ಸಾಧನೆ ಸಂದರ್ಭದಲ್ಲಿ ಅಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದರ್ಶಿ ರಾಧಾ ಶ್ರೀನಿವಾಸ, ಪ್ರಾಂಶುಪಾಲ ಗೌರವ್ ಕೆ.ಎಸ್. ಮುಖ್ಯೊಪಾಧ್ಯಾಯರಾದ ರಾಘವೇಂದ್ರ, ನಾಗೇಶ್, ಶಿಕ್ಷಕರಾದ ಸರಸ್ವತಿ, ರೂಪ ಇದ್ದರು.

1. ದೀಕ್ಷಿತ್ ಎಲ್ – 9.1 CGPA
2. ಗೌತಮ್ ಗೌಡ .ಆರ್ – 9.08 CGPA
3. ಸೋನಿಕ. ಟಿ – 9.05 CGPA

Leave a Reply

Your email address will not be published. Required fields are marked *