ನಗರದ ಸಿದ್ದೇನಾಯಕನಹಳ್ಳಿ ಬಳಿ ಅತಿವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಹೊಡಿದಿದೆ. ಅದೇ ಸಮಯದಲ್ಲಿ ಕಾರಿನ ಹಿಂಬದಿ ಬರುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಟ್ರೈಲರ್ ಮುಗುಚಿಬಿದ್ದ ಘಟನೆ ಶನಿವಾರ ನಡೆದಿದೆ.
ಕಾರು ಬೆಂಗಳೂರನತ್ತ ಹೊರಟಿತ್ತು ಸಿದ್ದೇನಾಯಕನಹಳ್ಳಿ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರಿನ ಹಿಂದೆ ಹಾಲೋಬ್ಲಾಕ್ ಹೊತ್ತ ಟ್ರ್ಯಾಕ್ಟರ್ ದಿಢೀರಾನೆ ಬ್ರೇಕ್ ಹಾಕುತ್ತಿದ್ದಂತೆ ಟ್ರೈಲರ್ ರಸ್ತೆಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ನಗರ ಠಾಣಾ ಪೊಲೀಸರು ದೌಡಾಯಿಸಿ ಅಪಘಾತಕ್ಕೀಡಾದ ವಾಹನಗಳನ್ನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.