ಸಿದ್ದೇನಾಯಕನಹಳ್ಳಿಯಲ್ಲಿ 50 ಹಾಸಿಗೆಗಳ ತೀವ್ರ ಚಿಕಿತ್ಸಾ ಘಟಕ ಕಟ್ಟಡದ ಶಂಕು ಸ್ಥಾಪನೆ

ಪಿಎಂ ಎಬಿಎಚ್ಐಎಂ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆ ಆವರಣ ಸಿದ್ದೇನಾಯಕನಹಳ್ಳಿಯಲ್ಲಿ ವಿಡಿಯೋ ಸಂವಾದದ ಮೂಲಕ 50 ಹಾಸಿಗೆಗಳ ತೀವ್ರ ಚಿಕಿತ್ಸಾ ಘಟಕ ಕಟ್ಟಡದ ಶಂಕು ಸ್ಥಾಪನೆ ನಡೆಯಿತು.

ಪಿಎಂ-ಎಬಿಎಚ್‌ಐಎಂ (ಪ್ರಧಾನ ಮಂತ್ರಿ ಆಯುಷ್ಮಾನ್‌ ಭಾರತ್‌ ಹೆಲ್ತ್‌ ಇನ್‌ಫ್ರಾಸ್ಟ್ರಕ್ಚರ್‌ ಮಿಷನ್‌ ) ಕಾರ್ಯಕ್ರಮದಡಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡಕ್ಕೆ ಅ.29ರಂದು ಐಎಂಎ ಭವನ, ಅತ್ತಾವರ, (ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆಯ ನೂತನ ಶಸ್ತ್ರಚಿಕಿತ್ಸಾ ವಿಭಾಗದ ಮುಂಭಾಗ)ದಲ್ಲಿ ಶಿಲಾನ್ಯಾಸ ನಡೆಯಿತು.

ಅದೇರೀತಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಮಿಷನ್ (ಪಿಎಂ-ಎಬಿಹೆಚ್‌ಐಎಂ) ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿದ್ದೇನಾಯಕನಹಳ್ಳಿ ಜಿಲ್ಲಾ ಆಸ್ಪತ್ರೆಯ 50 ಹಾಸಿಗೆಗಳ ತೀವ್ರ ಚಿಕಿತ್ಸಾ ಘಟಕ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಅವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ ಸುನಿಲ್ ಕುಮಾರ್, ನಗರಸಭೆ ಅಧ್ಯಕ್ಷರಾದ ಸುಮಿತ್ರ ಆನಂದ್, ನಗರಸಭೆಯ ಎಲ್ಲಾ ಸದಸ್ಯರುಗಳು, ಎಲ್ಲಾ ನಾಮನಿರ್ದೇಶಕ ಸದಸ್ಯರು, ಆಸ್ಪತ್ರೆ ಆರೋಗ್ಯ ರಕ್ಷ ಸಮಿತಿ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿ ವೃಂದದವರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *