ಎಟಿಎಂ ಸರ್ಕಾರದ ಶ್ಯಾಡೋ ಸಿಎಂ ಯತೀಂದ್ರ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಪ್ರಿಯಾಂಕ್ ಖರ್ಗೆ ಕೈಯಾಡಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದ ಬಿಜೆಪಿ
ಹಣಕಾಸು: ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯರವರು, ವಿನಾಕಾರಣ ಉತ್ತರ ನೀಡುವುದು ಪ್ರಿಯಾಂಕ್ ಖರ್ಗೆ..!
ಬೆಂಗಳೂರು ನಗರಾಭಿವೃದ್ಧಿ: ಸಚಿವ ಡಿ. ಕೆ. ಶಿವಕುಮಾರ್, ಚೆಸ್ ಆಡುತ್ತಿರುವುದು ಪ್ರಿಯಾಂಕ್ ಖರ್ಗೆ..!
ಗೃಹ ಇಲಾಖೆ: ಸಚಿವ ಖಾತೆ ಡಾ. ಜಿ. ಪರಮೇಶ್ವರ್, ಅಧಿಕಾರ ಚಲಾಯಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
ಕಾನೂನು ಮತ್ತು ಸಂಸದೀಯ ವ್ಯವಹಾರ: ಸಚಿವ ಎಚ್ ಕೆ ಪಾಟೀಲ್, ಅನಧಿಕೃತ ನಿರ್ವಹಣೆ ಪ್ರಿಯಾಂಕ್ ಖರ್ಗೆ..!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ನಾಮಕಾವಸ್ಥೆ ದಿನೇಶ್ ಗುಂಡೂರಾವ್, ಮದ್ದು ಚುಚ್ಚುತ್ತಿರುವುದು ಪ್ರಿಯಾಂಕ್ ಖರ್ಗೆ..!
ಸಮಾಜ ಕಲ್ಯಾಣ: ತೋರಿಕೆಗಾಗಿ ಹೆಚ್. ಸಿ. ಮಹದೇವಪ್ಪ, ಕೈಯಾಡಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
ಕಂದಾಯ: ಹೇಳಿಕೊಳ್ಳಲು ಕೃಷ್ಣಭೈರೇಗೌಡ, ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ..!
ಹೀಗೆ ಎಲ್ಲಾ ಇಲಾಖೆಗಳಲ್ಲಿ ಪ್ರಿಯಾಂಕ್ ಖರ್ಗೆ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಿಡಿಕಾರಿರೋ ಬಿಜೆಪಿ.
ಕಾಂಗ್ರೆಸ್ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿರೋ ಬಿಜೆಪಿ.