ಸಾರಿಗೆ ನಿಗಮಗಳಿಗೆ ನೀಡಬೇಕಾದ ಅನುದಾನವನ್ನು ಬಾಕಿ ಉಳಿಸಿಕೊಂಡ ಸಿದ್ದರಾಮಯ್ಯ ಸರ್ಕಾರ ಇದೀಗ 2 ರೂ. ಡಿಸೇಲ್ ದರ ಏರಿಕೆ ಮಾಡಿ ಸಾರಿಗೆ ನಿಗಮಗಳ ತಲೆ ಮೇಲೆ ಚಪ್ಪಡಿ ಕಲ್ಲು ಏಳೆದಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಡಿಸೇಲ್ ದರ ಹೆಚ್ಚಳದಿಂದ ನಷ್ಟ ಅನುಭವಿಸುತ್ತಿವೆ. ಹೀಗಾಗಿ ನಷ್ಟ ಸರಿದೊಗಿಸಿಕೊಳ್ಳಲು ಬಸ್ ಪ್ರಯಾಣ ದರ ಏರಿಸಲು ಚಿಂತನೆ ನಡೆಸಿವೆ ಎಂದು ದೂರಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ, ಸಾರಿಗೆ ನಿಗಮಗಳನ್ನು ಮುಚ್ಚಿ ಖಾಸಗಿಗೆ ವಹಿಸಲು ಚಿಂತನೆ ನಡೆಸಿದ್ದರೆ ಬಹಿರಂಗಪಡಿಸಿ, ಹೀಗೆ ಹಂತ ಹಂತವಾಗಿ ಸಾರಿಗೆ ನಿಗಮಗಳನ್ನು ದಿವಾಳಿ ಮಾಡಬೇಡಿ ಆಕ್ರೋಶ ವ್ಯಕ್ತಪಡಿಸಿದೆ.
ಅದೇರೀತಿ ಸಾಮಾಜಿಕ ಜಾಲತಾಣಗಳಲ್ಲಿ ನಟ ವಿನ್ ಡೀಸೆಲ್ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಎಡಿಟ್ ಚಿತ್ರವನ್ನು ಹಂಚಿಕೊಂಡು, ಹಾಲಿವುಡ್ ನಲ್ಲಿ ವಿನ್ ಡೀಸೆಲ್ ಕಾಲ್ ಶೀಟ್ ಕಾಸ್ಟ್ಲಿ – ಕರ್ನಾಟಕದಲ್ಲಿ ಡೀಸೆಲ್ ರೇಟ್ ಸಹ ಕಾಸ್ಟ್ಲಿ!! ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರನ್ನು ‘ಕಾಸ್ಟ್ಲಿ ಡೀಸೆಲ್’ ಎಂದು ಲೇವಡಿ ಮಾಡಿದೆ.