
ಹೊಸಕೋಟೆ : ಇಡೀ ರಾಜ್ಯದಾದ್ಯಂತ ಹನುಮ ಜಯಂತಿಯ ಸಂಭ್ರಮ ಮನೆ ಮಾಡಿದೆ..ಈ ನಡುವೆ ಎಲ್ಲಾ ಗ್ರಾಮಗಳಲ್ಲಿ ಆಂಜನೇಯನ ಗುಡಿಗೆ ವಿಶೇಷ ಪೂಜೆಗಳನ್ನ ನಡೆಸಲಾಗಿದೆ…ಹೀಗೆ ಹೊಸಕೋಟೆ ತಾಲೂಕು ವಾಗಟ ಗ್ರಾಮದಲ್ಲಿ ಸಾವಿರ ವರ್ಷಗಳ ಇತಿಹಾಸ ಪ್ರಸಿದ್ದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಇವತ್ತು ಬಹಳ ಅದ್ದೂರಿಯಾಗಿ ಹನುಮಜಯಂತಿ ಆಚರಣೆ ಮಾಡಲಾಯ್ತು..
ಗ್ರಾಮಸ್ಥರೆಲ್ಲರೂ ಸೇರಿ ಬಹಳ ಅದ್ದೂರಿಯಿಂದ ಸ್ವಾಮಿಗೆ ವಿಶೇಷ ಹೂ ಅಲಂಕಾರ ಮಾಡಿ ಪೂಜೆ ನೆರವೇರಿಸಿದ್ರು.. ಭಕ್ತಾದಿಗಳೆಲ್ಲರಿಗೂ ಪ್ರಸಾದ ವಿನಿಯೋಗದ ವ್ಯವಸ್ಥೆಯೂ ಮಾಡಲಾಗಿತ್ತು…