2023ರ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇಬ್ಬರು ಐ.ಎ.ಎಸ್. ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ, ಒಬ್ಬರು ಐ.ಪಿ.ಎಸ್. ಅಧಿಕಾರಿಯನ್ನು ಭದ್ರತಾ(ಪೊಲೀಸ್) ವೀಕ್ಷಕರನ್ನಾಗಿ ಹಾಗೂ ನಾಲ್ಕು ಜನ ಐ.ಆರ್.ಎಸ್. ಅಧಿಕಾರಿಗಳನ್ನು ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಿ ನಿಯೋಜಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರು, ಭದ್ರತಾ(ಪೊಲೀಸ್) ವೀಕ್ಷಕರು ಹಾಗೂ ವೆಚ್ಚ ವೀಕ್ಷಕರಿಗೆ ಹಂಚಿಕೆ ಮಾಡಿದ ವಿಧಾನಸಭಾ ಕ್ಷೇತ್ರ ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ.
ಸಾಮಾನ್ಯ ವೀಕ್ಷಕರ ವಿವರ:
178-ಹೊಸಕೋಟೆ ವಿಧಾನಸಭಾ ಕ್ಷೇತ್ರ ಹಾಗೂ 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಡಿ.ರೊನಾಲ್ಡ್ ರೋಸ್(ಮೊ.ಸಂ.: 6363716513)
180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಹಾಗೂ 181-ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಶಿಲ್ಪ ಗುಪ್ತ (ಮೊ.ಸಂ.: 8618630558) ಸಾಮಾನ್ಯ ವೀಕ್ಷಕರಾಗಿ ನೇಮಿಸಲಾಗಿದೆ.
ಭದ್ರತಾ(ಪೊಲೀಸ್) ವೀಕ್ಷಕರ ವಿವರ:
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಐ.ಪಿ.ಎಸ್. ಅಧಿಕಾರಿ ರೋಮಿಲ್ ಬಾನಿಯಾ ಅವರನ್ನು ಭದ್ರತಾ(ಪೊಲೀಸ್) ವೀಕ್ಷಕರನ್ನಾಗಿ ನೇಮಿಸಿದೆ.
ವೆಚ್ಚ ವೀಕ್ಷಕರ ವಿವರ:
178-ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚಂದನ್ ದುತ್ತ(ಮೊ.ಸಂ.: 8088979205),
179-ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಡಾ.ದಿನೇಶ್‌ಕುಮಾರ್ ಬಿಸೆನ್(ಮೊ.ಸಂ.: 8618854749),
180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಅತುಲ್ ಪಾಂಡೆ(ಮೊ.ಸಂ.: 9019456827)
181-ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ರಾಮಚಂದ್ರನ್.ಜಿ(ಮೊ.ಸಂ.: 8088962561) ಅವರನ್ನು ಚುನಾವಣಾ ವೆಚ್ಚ ವೀಕ್ಷರನ್ನಾಗಿ ನೇಮಿಸಲಾಗಿದೆ.
ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಅಕ್ರಮವಾಗಿ ಹಣ ಸಾಗಾಟ ಮಾಡುವುದು, ಹಂಚುವುದು, ಅಕ್ರಮ ಮದ್ಯ, ಚಿನ್ನ, ಹಣ, ಇನ್ನಿತರ ವಸ್ತುಗಳ ಸಾಗಾಟ, ಹಣ ಹಂಚಿಕೆ ಮಾಡುವುದು, ಉಡುಗೊರೆ ನೀಡುವುದು ಕಂಡುಬಂದಲ್ಲಿ ಹಾಗೂ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಯಾವುದೇ ಅಹವಾಲುಗಳನ್ನು ಸಾರ್ವಜನಿಕರು ಸಂಬಂಧಪಟ್ಟ ವೆಚ್ಚ ವೀಕ್ಷಕರಿಗೆ ದೂರು ನೀಡಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.